ADVERTISEMENT

ನಾಡ ನುಡಿಗೆ ನಾವೆಲ್ಲರು ಬದ್ಧರಾಗಿರಬೇಕು: ಮಧುರಾಜ್ ಕೂಡ್ಲಗಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 8:32 IST
Last Updated 2 ನವೆಂಬರ್ 2022, 8:32 IST
ಶಹಾಪುರದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಧುರಾಜ ಕೂಡ್ಲಗಿ, ಅಧಿಕಾರಿಗಳು ಭಾಗವಹಿಸಿದ್ದರು
ಶಹಾಪುರದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಧುರಾಜ ಕೂಡ್ಲಗಿ, ಅಧಿಕಾರಿಗಳು ಭಾಗವಹಿಸಿದ್ದರು   

ಶಹಾಪುರ: ‘ಸ್ವಾಭಿಮಾನ ಹಾಗೂ ಸಹಬಾಳ್ವೆಯ ಸಂಕೇತ ರಾಜ್ಯೋತ್ಸವ. ಕೇವಲ ನವೆಂಬರ್ 1 ರಂದು ರಾಜ್ಯೋತ್ಸವ ಆಗಬಾರದು ನಂಬರ್ 1 ರಾಜ್ಯೋತ್ಸವ ಆಗಬೇಕು. ನಾಡ ನುಡಿಗೆ ನಾವೆಲ್ಲರು ಬದ್ಧರಾಗಿರಬೇಕು’ ಎಂದು ತಹಶೀಲ್ದಾರ್ ಮಧುರಾಜ್ ಕೂಡ್ಲಗಿ ತಿಳಿಸಿದರು.

ನಗರದ ಟೌನ್ಹಾಲ್‌ನಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಶಿಕ್ಷಕ ಶಿವಶರಣಪ್ಪ ಶಿರೂರ ಮಾತನಾಡಿದರು.

ADVERTISEMENT

ನಗರದ ಸಿ.ಬಿ ಕಮಾನ್‌ನಿಂದ ಟೌನ್ ಹಾಲ್‌ವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮಕ್ಕಳು ಅಕ್ಕ ಮಹಾದೇವಿ, ಓನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ ಸೇರಿದಂತೆ ಹಲವು ಮಹಾನ್ ನಾಯಕರ ಪೋಷಾಕು ಧರಿಸಿ ಗಮನ ಸೆಳೆದರು.

ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಲ್ಲಿಕಾರ್ಜುನ್ ಚಿಲ್ಲಾಳ, ನಗರಸಭೆ ಅಧ್ಯಕ್ಷೆ ಗಿರಿಜಮ್ಮ ಮಾಲಿಪಾಟೀಲ, ಪೌರಾಯುಕ್ತ ರಮೇಶ ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಸೀಬಾ ಜಲಿಯನ್, ಬಿಆರ್ಸಿ ರೇಣುಕಾ ಪಾಟೀಲ, ಪಿ.ಐ ಶ್ರೀನಿವಾಸ್ ಅಲ್ಲಾಪುರೆ, ಟಿಎಚ್ಒ ರಮೇಶ ಗುತ್ತೆದಾರ, ಕಂದಾಯ ನಿರೀಕ್ಷಕ ಗಿರೀಶ್, ನಗರಸಭೆ ಸದಸ್ಯರಾದ ಬಸವರಾಜ ಚೆನ್ನೂರ, ಶಿವುಕುಮಾರ ತಳವಾರ, ವೆಂಕಟೇಶ ಬೊನೆರ ಇದ್ದರು.

ಸ್ಥಳಾಂತರ ಪೋಷಕರು ಬೇಸರ: ಪ್ರತಿ ಬಾರಿಯೂ ನಗರದ ಹೃದಯ ಭಾಗದಲ್ಲಿರುವ ಸಿಪಿಎಸ್ ಶಾಲಾ ಮೈದಾನದಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಯಿಸಿಕೊಂಡು ಬರಲಾಗುತ್ತಿತ್ತು. ಪ್ರಸಕ್ತ ವರ್ಷ ನಗರದ ಹೊರವಲಯದ ಟೌನ್ ಹಾಲ್ ಗೆ ಸ್ಥಳಾಂತರಿಸಿದ್ದಕ್ಕೆ ಶಾಲಾ ಮಕ್ಕಳ ಪೋಷಕರು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ ಸ್ಥಬ್ದ ಚಿತ್ರ ಮೆರವಣಿಗೆ ನಗರದ ರಾಜಬೀದಿಯಲ್ಲಿ ಸಂಚರಿಸಿದಾಗ ನಗರದ ಜನತೆ ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಸಿಬಿ ಕಮಾನಿಂದ ಟೌನ್‌ ಹಾಲ್‌ವರೆಗೆ ಸಿಮೀತಗೊಳಿಸಿರುವುದು ಕಾಟಾಚಾರದ ಕಾರ್ಯಕ್ರಮ ಇದಾಗಿತ್ತು ಎಂದು ಪಾಲಕರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.