ADVERTISEMENT

ಹುಣಸಗಿ: ಕಸಾಪ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 6 ಮೇ 2022, 4:09 IST
Last Updated 6 ಮೇ 2022, 4:09 IST
ಹುಣಸಗಿ ಪಟ್ಟಣದ ಕಸಾಪ ಕಾರ್ಯಾಲಯದಲ್ಲಿ ಗುರುವಾರ ನಡೆದ ಕಸಾಪ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ಬಸವರಾಜ ಬಿರಾದಾರ, ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಇತರರು ಭಾಗವಹಿಸಿದ್ದರು
ಹುಣಸಗಿ ಪಟ್ಟಣದ ಕಸಾಪ ಕಾರ್ಯಾಲಯದಲ್ಲಿ ಗುರುವಾರ ನಡೆದ ಕಸಾಪ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ಬಸವರಾಜ ಬಿರಾದಾರ, ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಇತರರು ಭಾಗವಹಿಸಿದ್ದರು   

ಹುಣಸಗಿ: ಅಗಾಧವಾದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪ್ರತಿ ಮನೆ ಹಾಗೂ ಮನಗಳಿಗೆ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಕಸಾಪ ಕಾರ್ಯಕ್ರಮ ರೂಪಿಸುವಂತಾಗಬೇಕು ಎಂದು ಉಪ ತಹಶಿಲ್ದಾರ್ ಬಸವರಾಜ ಬಿರಾದಾರ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಸಾಪದ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು

108 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕಸಾಪವು ನಾಡಿನ ನೆಲ, ಜಲ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ನಿತ್ಯ ನಿರಂತರವಾಗಿ ನಡೆಸಿಕೊಂಡು ಬಂದಿರುವದು ಸ್ತುತ್ಯಾರ್ಹ ಎಂದರು.

ADVERTISEMENT

ಪರಿಷತ್ತಿನ ನಿಕಟ ಪೂರ್ವ ಗೌರವ ಕಾರ್ಯದರ್ಶಿ ನಾಗನಗೌಡ ಪಾಟೀಲ ಮಾತನಾಡಿ ಕನ್ನಡದ ಮನಸ್ಸುಗಳ ಮೇಲೆ ಕಸಾಪ ಬೀರಿದ ಪ್ರಭಾವ ಅತ್ಯಂತ ಹಿರಿದಾದುದು. 108 ಹಿಂದೆ ಆಗಿನ ಮೈಸೂರು ಮಹಾರಾಜರಿಂದ ಸಂಸ್ಥಾಪನೆಗೊಂಡು, ನಂತರ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದ ದಿಗ್ಗಜರು, ಮಹಾನ್ ಕವಿ, ಪುಂಗವರು ಹಾಗೂ ಘಟಾನುಘಟಿ ನಾಯಕರಿಂದ ಮತ್ತಷ್ಟು ಬಲಗೊಂಡಿತು. ಅನೇಕ ಹೋರಾಟಗಳ ಮೂಲಕ ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಿಸಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ಕಸಾಪ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವೆಲ್ಲವುಗಳ ಸಂರಕ್ಷಣೆಯ ಜೊತೆಗೆ ಪ್ರಸಾರ ಹಾಗೂ ಅಭಿವೃದ್ಧಿ ಮೂಲ ಧ್ಯೇಯೋದ್ಧೇಶಗಳೊಂದಿಗೆ ಕಸಾಪವನ್ನು ಜನ ಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಏಕೈಕ ಸ್ವಾಯತ್ತ ಸಂಸ್ಥೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಆರ್.ಎಲ್ ಸುಣಗಾರ, ಶಿವಕುಮಾರ ಬಂಡೋಳಿ, ಬಸವರಾಜ ಸಜ್ಜನ್, ಮಶಾಕ ಯಾಳಗಿ, ಬಸವರಾಜ ಕೋಳಕೂರ, ಭೀಮಣ್ಣ ನಾಯ್ಕೋಡಿ ಇತರರು ಇದ್ದರು.

ಕಸಾಪದ ಗೌರವ ಕಾರ್ಯದರ್ಶಿ ಬಸವರಾಜ ಮೇಲಿನಮನಿ ನಿರೂಪಿಸಿದರು. ಮಲ್ಲಣ್ಣ ಡಂಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.