ADVERTISEMENT

ಯಾದಗಿರಿ | ಮತ್ತೆ 13 ಜನರಿಗೆ ಕೋವಿಡ್‌ ದೃಢ

ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 822ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 16:01 IST
Last Updated 15 ಜೂನ್ 2020, 16:01 IST
ಗುರುಮಠಕಲ್‌ ತಾಲ್ಲೂಕಿನ ಕಂದಕೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಭೇಟಿ ನೀಡಿದರು
ಗುರುಮಠಕಲ್‌ ತಾಲ್ಲೂಕಿನ ಕಂದಕೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಭೇಟಿ ನೀಡಿದರು   

ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ 13 ಜನರಿಗೆಕೋವಿಡ್‌ ದೃಢಪಟ್ಟಿದೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ 822ಕ್ಕೆ ಏರಿಕೆಯಾಗಿದೆ.

ಯಾದಗಿರಿ ತಾಲ್ಲೂಕಿನ ಥಾನುನಾಯಕ ತಾಂಡಾದ 17 ವರ್ಷದ ಯುವಕ, 23 ವರ್ಷದ ಪುರುಷ, ಅರಕೇರಾ ಕೆ. ಗ್ರಾಮದ 35 ವರ್ಷದ ಮಹಿಳೆ, 40 ವರ್ಷದ ಪುರುಷ,ಗುರುಮಠಕಲ್‍ನ 44 ವರ್ಷದ ಪುರುಷ, ತಾಲ್ಲೂಕಿನ ಚಂಡ್ರಿಕಿ ಗ್ರಾಮದ 36 ವರ್ಷದ ಮಹಿಳೆ, ಪಡಪಲ್ಲಿ ಗ್ರಾಮದ 29 ವರ್ಷದ ಪುರುಷ, 20 ವರ್ಷದ ಯುವತಿ, 26 ವರ್ಷದ ಮಹಿಳೆ,25 ವರ್ಷದ ಪುರುಷ, 27 ವರ್ಷದ ಪುರುಷ,ಚಪೆಟ್ಲಾ ಗ್ರಾಮದ 30 ವರ್ಷದ ಮಹಿಳೆ,ಸುರಪುರ ತಾಲ್ಲೂಕಿನ ದೇವಾಪುರದ 24 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗಿಲಿದೆ.

13 ಜನ ಸೋಂಕಿತರಲ್ಲಿ 6 ಮಹಿಳೆಯರು, 7 ಪುರುಷರಿದ್ದಾರೆ.ಸೋಂಕಿತರೆಲ್ಲರೂ ಮಹಾರಾಷ್ಟ್ರದ ಮುಂಬೈಯಿಂದ ಜಿಲ್ಲೆಗೆ ಹಿಂದಿರುಗಿದ್ದಾರೆ.

ADVERTISEMENT

ಸೋಮವಾರ 44 ಜನ ಗುಣಮುಖ: ಜಿಲ್ಲೆಯಲ್ಲಿ ಕೋವಿಡ್-19 ದೃಡಪಟ್ಟ 822 ವ್ಯಕ್ತಿಗಳ ಪೈಕಿ ಸೋಮವಾರ ಮತ್ತೆ 44 ಜನ ಗುಣಮುಖರಾಗಿದ್ದು, ಜೂನ್ 15ರವರೆಗೆ ಒಟ್ಟು 373 ಜನ ಗುಣಮುಖರಾದಂತಾಗಿದೆ.

ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಉಳಿದ 448 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 1,300 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2,697 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 46 ಕಂಟೇನ್‍ಮೆಂಟ್ ಝೋನ್‍ಗಳನ್ನು ರಚಿಸಲಾಗಿದೆ.

277 ವರದಿ ಬಾಕಿ: ಕೊರೊನಾ ವೈರಸ್ ಪತ್ತೆಗೆ ಜಿಲ್ಲೆಯಿಂದ ಕಳುಹಿಸಿದ ಮಾದರಿಗಳ ಪೈಕಿಸೋಮವಾರ 814 ವರದಿಗಳು ನೆಗೆಟಿವ್ ಬಂದಿವೆ. ಇದರೊಂದಿಗೆ ಈವರೆಗೆ 19,912 ಮಾದರಿಗಳ ವರದಿ ನೆಗೆಟಿವ್ ಬಂದಂತಾಗಿದೆ. 277 ಮಾದರಿಗಳ ವರದಿ ಬರಬೇಕಿದೆ.

ಹೊಸ ಜಿಲ್ಲಾಸ್ಪತ್ರೆಯಲ್ಲಿ 172, ಶಹಾಪುರ, ಸುರಪುರ, ಬಂದಳ್ಳಿ ಏಕಲವ್ಯ ಕೊರೊನಾ ಕೇರ್‌ ಸೆಂಟರ್‌ನಲ್ಲಿ 252 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 21ಸಾಂಸ್ಥಿಕಕ್ವಾರಂಟೈನ್ ಸೆಂಟರ್‌ಗಳಲ್ಲಿ 1,321 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.