ADVERTISEMENT

ಕೆಂಭಾವಿ: ಸರ್ಕಾರಿ ಶಾಲೆಗೆ ಎಲ್‍ಇಡಿ ಟಿವಿ ವಿತರಣೆ

ಕೆಂಭಾವಿ ಪ್ರೌಢಶಾಲಾ ಗೆಳೆಯರ ಬಳಗದಿಂದ ದೇಣಿಗೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 6:35 IST
Last Updated 3 ಡಿಸೆಂಬರ್ 2025, 6:35 IST
ಕೆಂಭಾವಿ ಪ್ರೌಢಶಾಲಾ ಗೆಳೆಯರ ಬಳಗದಿಂದ ವತಿಯಿಂದ ಲಿಂ.ಗುರುಬಸಯ್ಯ ಚಿಕ್ಕಮಠ ಅವರ 2ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತವಾಗಿ ಜೈ ಭೀಮ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಎಲ್‍ಇಡಿ ಟಿವಿ ವಿತರಿಸಲಾಯಿತು
ಕೆಂಭಾವಿ ಪ್ರೌಢಶಾಲಾ ಗೆಳೆಯರ ಬಳಗದಿಂದ ವತಿಯಿಂದ ಲಿಂ.ಗುರುಬಸಯ್ಯ ಚಿಕ್ಕಮಠ ಅವರ 2ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತವಾಗಿ ಜೈ ಭೀಮ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಎಲ್‍ಇಡಿ ಟಿವಿ ವಿತರಿಸಲಾಯಿತು   

ಕೆಂಭಾವಿ: ‘ಸಮಾಜದಿಂದ ಪಡೆದುಕೊಂಡವರಿಗಿಂತ, ಸಮಾಜಕ್ಕೆ ನೀಡಿದವರನ್ನು ಜಗತ್ತು ದಶಕಗಳು ಕಳೆದರು ಸ್ಮರಿಸುತ್ತದೆ’ ಎಂದು ನಂದಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ.ಸಿ ಪಾಟೀಲ ಹೇಳಿದರು.

ಲಿಂ.ಗುರುಬಸಯ್ಯ ಚಿಕ್ಕಮಠ ಅವರ 2 ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತವಾಗಿ ಕೆಂಭಾವಿ ಪ್ರೌಢಶಾಲಾ ಗೆಳೆಯರ ಬಳಗದಿಂದ ವತಿಯಿಂದ ಜೈ ಭೀಮ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಎಲ್‍ಇಡಿ ಟಿವಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಗೆಳೆಯನ ನೆನಪನ್ನು ಸದಾ ಸ್ಮರಿಸುತ್ತಾ ಸಮಾಜಸೇವೆಯಲ್ಲಿ ತೊಡಗಿರುವ ಪ್ರೌಢಶಾಲಾ ಗೆಳೆಯರ ಬಳಗದ ಕಾರ್ಯ ಅತ್ಯಂತ ಶ್ಲಾಘನೀಯ’ ಎಂದರು.

ADVERTISEMENT

ಪ್ರಾಸ್ತಾವಿಕ ಮಾತನಾಡಿದ ಶಿಕ್ಷಕ ಮಲ್ಲಿಕಾರ್ಜುನ ಕುಂಬಾರ, ‘ಲಿಂ.ಗುರುಬಸಯ್ಯ ಚಿಕ್ಕಮಠ ಅವರು ವಿಶೇಷ ಚೇತನರಾಗಿದ್ದರೂ ಸಹ ವಿಶೇಷವಾದ ಜ್ಞಾನ ಉಳ್ಳುವರು ಆಗಿದ್ದರು. ನಮ್ಮ ಗೆಳೆಯರ ಬಳಗದಲ್ಲಿ ಅತ್ಯಂತ ಹೆಚ್ಚು ಕ್ರೀಯಾಶೀಲ ವ್ಯಕ್ತಿಯಾಗಿದ್ದರು’ ಎಂದರು.

ಸಿಆರ್‌ಪಿ ಬಂದೇನವಾಜ ನಾಲತವಾಡ ಮಾತನಾಡಿ, ‘ಗೆಳೆಯರ ಬಳಗದಿಂದ ನೀಡಿದಂತಹ ಟಿವಿಯನ್ನು ಸರಿಯಾದ ರೀತಿಯಲ್ಲಿ ಶಾಲೆಯಲ್ಲಿ ಉಪಯೋಗಿಸಲಾಗುವುದು. ಇದರಿಂದ ವಿದ್ಯಾರ್ಥಿಗಳ ಬೌದ್ದಿಕಮಟ್ಟ ಹೆಚ್ಚುತ್ತದೆ’ ಎಂದು ಹೇಳಿದರು.

ಎಸ್‍ಡಿಎಮ್‍ಸಿ ಅಧ್ಯಕ್ಷ ಬಸವಣ್ಣೆಪ್ಪ ಮಾಳಳ್ಳಿಕರ, ಮುಖ್ಯಶಿಕ್ಷಕ ಮಂದಾಕಿನಿ.ಎಸ್, ಮಂಜುನಾಥ ಕುಲಕರ್ಣಿ, ಶಿವು ಗೂಗಲ, ಏಜಾಜ ವಡಕೇರಿ ವೇದಿಕೆ ಮೇಲಿದ್ದರು.

ಸಿದ್ದಣ್ಣ ಸ್ವಾಗತಿಸಿದರು, ರಾಘವೇಂದ್ರ ನಿರೂಪಿಸಿದರು, ಬಸವರಾಜ ಅವಂಟಿ ವಂದಿಸಿದರು.