ADVERTISEMENT

₹5 ಲಕ್ಷ ಚೆಕ್ ವಿತರಿಸಿದ ಶಾಸಕ ಕಂದಕೂರ

ಮನೆ ಕುಸಿದು ಮೃತಪಟ್ಟಿದ್ದ ಸಾವಿತ್ರಮ್ಮ ಕುಟುಂಬಕ್ಕೆ ಶಾಸಕರ ನೆರವು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 16:09 IST
Last Updated 1 ಆಗಸ್ಟ್ 2020, 16:09 IST
ಗುರುಮಠಕಲ್ ಮತಕ್ಷೇತ್ರದ ಕಂದಕೂರ ಗ್ರಾಮದಲ್ಲಿ ಮನೆ ಕುಸಿದು ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಶಾಸಕ ನಾಗನಗೌಡ ಕಂದಕೂರ ಅವರು ಶನಿವಾರ ₹5 ಲಕ್ಷ ಪರಿಹಾರ ಧನ ಚೆಕ್ ಹಸ್ತಾಂತರಿಸಿದರು
ಗುರುಮಠಕಲ್ ಮತಕ್ಷೇತ್ರದ ಕಂದಕೂರ ಗ್ರಾಮದಲ್ಲಿ ಮನೆ ಕುಸಿದು ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಶಾಸಕ ನಾಗನಗೌಡ ಕಂದಕೂರ ಅವರು ಶನಿವಾರ ₹5 ಲಕ್ಷ ಪರಿಹಾರ ಧನ ಚೆಕ್ ಹಸ್ತಾಂತರಿಸಿದರು   

ಯಾದಗಿರಿ: ಗುರುಮಠಕಲ್‌ ತಾಲ್ಲೂಕಿನ ಕಂದಕೂರ ಗ್ರಾಮದಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ಮನೆ ಕುಸಿದು ಮೃತಪಟ್ಟಿದ್ದ ಸಾವಿತ್ರಮ್ಮ ಕುಟುಂಬಕ್ಕೆ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರು ಶನಿವಾರ ₹5 ಲಕ್ಷ ಪರಿಹಾರ ಧನದ ಚೆಕ್‍ನ್ನು ತಮ್ಮ ನಿವಾಸದಲ್ಲಿ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಶಾಸಕ, ಮುಂಗಾರು ಆರಂಭದಲ್ಲಿಯೇ ನಿರಂತರವಾಗಿ ಸುರಿದ ಭಾರಿ ಮಳೆಗೆ ಮನೆ ಕುಸಿದು ಸಾವಿತ್ರಮ್ಮ ಸಾವನ್ನಪ್ಪಿದ್ದು ಅತ್ಯಂತ ನೋವಿನ ಸಂಗತಿ ಎಂದರು. ತೀರಾ ಹಳೆಯದಾದ ಮಣ್ಣಿನ ಮನೆಗಳಲ್ಲಿ ವಾಸಿಸುವ ಜನರು ಮಳೆಗಾಲದ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಹಳೆಯ ಹಾಗೂ ಶಿಥಿಲ ಮನೆಗಳು ತುಂಬಾ ಅಪಾಯಕಾರಿ. ಹೀಗಾಗಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಜನರಿಗೆ ಕಿವಿ ಮಾತು ಹೇಳಿದರು.

₹5 ಲಕ್ಷದ ಪರಿಹಾರದ ಮೊತ್ತದ ಚೆಕ್‍ನ್ನು ಮೃತ ಮಹಿಳೆಯ ಪತಿ ಶಿವಣ್ಣ ಕಂದಕೂರ ಅವರಿಗೆ ನೀಡಲಾಯಿತು. ಕಂದಾಯ ನಿರೀಕ್ಷಕ ಸುಭಾಷ, ಗ್ರಾಮದ ಮುಖಂಡರಾದ ಅಶೋಕರೆಡ್ಡಿ, ಸಾಬಣ್ಣ, ನಿಂಗಪ್ಪ, ಬಾಬು, ನರಸಪ್ಪ, ಭಾಸ್ಕರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.