ADVERTISEMENT

ಚಿರತೆ ಪ್ರತ್ಯಕ್ಷ ಗ್ರಾಮಸ್ಥರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 7:48 IST
Last Updated 6 ಅಕ್ಟೋಬರ್ 2025, 7:48 IST
   

ಯಾದಗಿರಿ: ತಾಲ್ಲೂಕಿನ ಮಸಕನಹಳ್ಳಿ ಗ್ರಾಮದ ಹೊರವಲಯಲ್ಲಿ ಚಿರತೆ ಇದೆ. ಕಳೆದ 4 ತಿಂಗಳಲ್ಲಿ ಹಸು, ಆಡು, ಮೇಕೆಗಳನ್ನು ಬಲಿ ತೆಗೆದುಕೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ.

ಗ್ರಾಮದ ಸುತ್ತಲು ಗುಡ್ಡಗಾಡು ಪ್ರದೇಶ ಇರುವುದರಿಂದ ಮೃಗಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.

ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಲ್ಲಿ ದಿಢೀರ್ ಪ್ರತಿಭಟನೆ ಕೂಡಾ ನಡೆಸಿದರು.

ADVERTISEMENT

‘ಯಾವ ಕಾರಣಕ್ಕೂ ರೈತರು ಜಮೀನುಗಳಿಗೆ ತೆರಳುವ ಸಂದರ್ಭದಲ್ಲಿ ಒಬ್ಬೊಂಟಿಯಾಗಿ ತೆರಳದೇ ಗುಂಪಾಗಿ ತೆರಳುವಂತೆ ಹೇಳಿದರು. ಅರಣ್ಯ ಅಧಿಕಾರಿಗಳು ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ಬೋನ್ ಇಟ್ಟು, ಚಿರತೆಯನ್ನು ಸೆರೆಹಿಡಿಯಬೇಕು. ಇಲ್ಲದಿದ್ದರೆ ಬಿಜಾಪುರ ಹೈದರಾಬಾದ್ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಆಂಜನೇಯ ಭಜಂತ್ರಿ, ರಫೀಕ್, ಸುರೇಶ, ಫಕೀರ್ ಸಾಬ್, ಹಣಮಂತ, ಕಾಸಿಂಸಾಬ್‌, ದೇವಿಂದ್ರಪ್ಪ, ಶಬೀರ್, ಅಲ್ಲಿಸಾಬ್‌, ನಿಂಗಪ್ಪ, ಗೌಸ್ ಪಟೇಲ್, ಕಾಶಮ್ಮ, ದಂಡಮ್ಮ, ನಾಗಮ್ಮ, ವಲ್ಲಿ ರಫೀಕ್, ಮುಬೀನ್, ಶಿವರೆಡ್ಡಿ, ಭೀಮರಾಯ, ಸಾಬಣ್ಣ, ಮರಗಪ್ಪ, ದೇವಸುಂದರ, ಮೈಬುಸಾಬ್‌, ಅಬ್ದುಲ್, ದಂಡಪ್ಪ, ಮೋನಪ್ಪ, ಶರಣಪ್ಪ, ಮಲಪ್ಪ, ಗಾಲೇಪ್ಪ, ಹಣಮಂತ, ತಾಯಪ್ಪ, ಪವನ್, ಮಂಜು ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.