ADVERTISEMENT

ಯಾದಗಿರಿ: ‘ಬಸವಾದಿ ಶರಣರ ತತ್ವಗಳನ್ನು ಪಾಲಿಸೋಣ’

​ಪ್ರಜಾವಾಣಿ ವಾರ್ತೆ
Published 1 ಮೇ 2025, 14:29 IST
Last Updated 1 ಮೇ 2025, 14:29 IST
ಗುರುಮಠಕಲ್ ಪಟ್ಟಣದ ನಾಣಾಪುರ ಬಡಾವಣೆಯಲ್ಲಿ ಬುಧವಾರ ಬಸವ ಜಯಂತಿ ಅಂಗವಾಗಿ ಜರುಗಿದ ಮೆರವಣಿಗೆಯಲ್ಲಿ ರೈತರು ತಮ್ಮ ಎತ್ತುಗಳ ಮೆರವಣಿಗೆ ಆಕರ್ಷಕವಾಗಿತ್ತು.
ಗುರುಮಠಕಲ್ ಪಟ್ಟಣದ ನಾಣಾಪುರ ಬಡಾವಣೆಯಲ್ಲಿ ಬುಧವಾರ ಬಸವ ಜಯಂತಿ ಅಂಗವಾಗಿ ಜರುಗಿದ ಮೆರವಣಿಗೆಯಲ್ಲಿ ರೈತರು ತಮ್ಮ ಎತ್ತುಗಳ ಮೆರವಣಿಗೆ ಆಕರ್ಷಕವಾಗಿತ್ತು.   

ಗುರುಮಠಕಲ್: ‘ಮೌಢ್ಯ, ಕಂದಾಚಾರ, ಜಾತಿಯತೆಯ ವಿರುದ್ಧ 12ನೇ ಶತಮಾನದಲ್ಲಿ ವಚನ ಕ್ರಾಂತಿಯ ಮೂಲಕ ಸಮಾಜ ಸುಧಾರಣೆಗೆ ಬಸವಣ್ಣನವರು ನಾಂದಿ ಹಾಡಿದರು. ಬಸವಾದಿ ಶರಣರು ಸಾರಿದ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಮತ್ತು ನಿತ್ಯ ಜೀವನದಲ್ಲಿ ಅವರ ಸಿದ್ಧಾಂತಗಳನ್ನು ಪಾಲಿಸೋಣ’ ಎಂದು ಮುಖಂಡ ಜಿ.ತಮ್ಮಣ್ಣ ಕರೆ ನೀಡಿದರು.

ಪಟ್ಟಣದ ನಾಣಾಪುರ ಬಡಾವಣೆಯ ಅಂಬೇಡ್ಕರ್ ನಗರ ಕಾಲೊನಿಯ ಬಸವ ಜಯಂತಿ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಬಸವ ಜಯಂತಿಯಲ್ಲಿ ಮಾತನಾಡಿದ ಅವರು, ಸಮ ಸಮಾಜದ ಕನಸು ಕಂಡಿದ ಬಸವಣ್ಣನವರು ತಮ್ಮ ವಚನಗಳ ಮೂಲಕ, ನಡೆಯ ಮೂಲಕ ಅದನ್ನು ಸಾಕಾರಗೊಳಿಸಲು ಶ್ರಮಿಸಿದ್ದರು. ಅವರ ಮಾರ್ಗದಲ್ಲಿ ನಾವೂ ಬದುಕುವ ಮೂಲಕ ಗೌರವಿಸೋಣ’ ಎಂದು ಹೇಳಿದರು.

ನಾಣಾಪುರ ಬಡಾವಣೆಯ ಅಂಬೇಡ್ಕರ್ ನಗರ ಕಾಲೊನಿಯಿಂದ ಪೊಲೀಸ್ ಠಾಣೆ, ಉಪ್ಪಾರಗಡ್ಡಾ ಮೂಲಕ ಮೆರವಣಿಗೆ ಮೂಲಕ ನಾಣಾಪುರ ಬಡಾವಣೆಗೆ ಹಿಂದಿರುಗಿದರು.

ADVERTISEMENT

ಮೆರವಣಿಗೆಯುದ್ದಕ್ಕೂ ಸಿಂಗರಿಸಿದ್ದ ರೈತರ ಜಾನುವಾರುಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದವು.

ಪಿಐ ದೇವೇಂದ್ರಪ್ಪ ಧೂಳಖೇಡ, ಪುರಸಭೆ ಸದಸ್ಯರಾದ ಬಾಬು ತಲಾರಿ, ಖಾಜಾ ಮೈನೋದ್ಧೀನ್, ಆಶನ್ನ ಬುದ್ದ, ಗುರುನಾಥ ತಲಾರಿ, ಫಯಾಜ್ ಅಹ್ಮದ್, ಮೋಹನರೆಡ್ಡಿ ನಜರಾಪುರ, ಸದಾಶಿವರೆಡ್ಡಿ ಕಾಕಲವಾರ, ಲಾಲಪ್ಪ ತಲಾರಿ, ಶರಣಪ್ಪ ಲಿಕ್ಕಿ, ಅಶೋಕ ಲಿಕ್ಕಿ, ವೆಂಕಟಪ್ಪ ಕಾವಲಿ, ನರಸಿಂಹ ಕೆ., ಸಾಬಪ್ಪ ಪೆಂಡ, ಸಾಯಿಕುಮಾರ, ನರಸಪ್ಪ ಕಾವಲಿ, ಅಶೋಕ, ಸಾಬಪ್ಪ. ಅನ್ವರ್ ಹೈಮದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.