ADVERTISEMENT

ಕೆಲಸ ನಿರ್ಲಕ್ಷಿಸಿದರೆ‌ ಕ್ರಮ: ಲೋಕಾಯುಕ್ತ ಸಿಪಿಐ ಗುರುರಾಜ ಕಟ್ಟಿಮನಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 10:24 IST
Last Updated 19 ಡಿಸೆಂಬರ್ 2019, 10:24 IST
ಹುಣಸಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣಗದಲ್ಲಿಅಹವಾಲು ಸ್ವೀಕಾರ ಸಭೆಯಲ್ಲಿ ಲೊಕಾಯುಕ್ತ ಸಿಪಿಐ ಗುರುರಾಜ ಕಟ್ಟಿಮನಿ ಮಾತನಾಡಿದರು
ಹುಣಸಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣಗದಲ್ಲಿಅಹವಾಲು ಸ್ವೀಕಾರ ಸಭೆಯಲ್ಲಿ ಲೊಕಾಯುಕ್ತ ಸಿಪಿಐ ಗುರುರಾಜ ಕಟ್ಟಿಮನಿ ಮಾತನಾಡಿದರು   

ಹುಣಸಗಿ: ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಜಾವಾಣಿ ಪತ್ರಿಕೆ ನೋಡಿ ಲೋಕಾಯುಕ್ತ ಸಿಪಿಐ ಗುರುರಾಜ ಕಟ್ಟಿಮನಿ ಹೇಳಿದರು.

ಹುಣಸಗಿಯ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಲೋಕಾಯುಕ್ತರ ಅಹವಾಲು ಸ್ವೀಕಾರ ಮತ್ತು ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಬಿಡಾಡಿ ದನಗಳ ಹತೋಟಿ, ಸ್ವಚ್ಛ ಮತ್ತು ನೈರ್ಮಲ್ಯಕ್ಕೆ ಒತ್ತು ನೀಡುವ ಮೂಲಕ ಅಗತ್ಯ ಕ್ರಮ ಜರುಗಿಸಿ ವರದಿ ನೀಡುವಂತೆ ಅಭಿವೃದ್ಧಿ ಅಧಿಕಾರಿ ರಾಜಶೇಖರ ನಾಯಕ ಅವರಿಗೆ ಹೇಳಿದರು.

ADVERTISEMENT

ದೇವಪುರ ಹುಣಸಗಿ ಮನಗೂಳಿ ರಾಜ್ಯ ಹೆದ್ದಾರಿಯ ಕಾಮಗಾರಿಯ ಕುರಿತು ಲೋಕೋಪಯೋಗಿ ಇಲಾಖೆಯ ಎಇಇ ಜಾವೇದ್ ಅವರಿಗೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ರುವ ಪ್ರಕರಣದ ವಿವರ ಸಲ್ಲಿಸಬೇ ಕೆಂದು ಸೂಚಿಸಿದರು.

ಸಾಮಾಜಿಕ ಕಾರ್ಯಕರ್ತ ದೇವು ಬೈಚಬಾಳ ಅವರು ಲಿಖಿತವಾಗಿ ದೂರು ನೀಡಿ ಹುಣಸಗಿಯ ಬಸವೇಶ್ವರ ವೃತ್ತದಿಂದ ಮಹಾಂತಸ್ವಾಮಿ ವೃತ್ತದ ವರೆಗೂ ಸಾರ್ವಜನಿಕ ಶೌಚಾಲಯ ನಿರ್ಮಿಸಿ ಎಂದರು.

ಬಿಸಿಎಂ ವಸತಿ ನಿಲಯದ ಸಮಸ್ಯೆಯ ಕುರಿತು ಬಂದ ದೂರಿನ ವಿಚಾರಣೆ ನಡೆಸಿ ಸಭೆಯಲ್ಲಿ ಹಾಜರಿದ್ದ ಅಧಿಕಾರಿ ಬಾಬು ಅವರಿಗೆ ವಿಚಾರಿ ಸಿದರು. ತಾಲ್ಲೂಕಿನಲ್ಲಿರುವ ಮೇಲ್ವಿ ಚಾರಕರ ಮೇಲೆ ಸೂಕ್ತ ನಿಯಂತ್ರ ಣವಿರಲಿ. ಇಲ್ಲದಿದ್ದಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ಸಭೆಯಲ್ಲಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಲಾಲಸಾಬ ಪೀರಾಪುರ ಅವರಿಗೂ ಅಂಗನವಾಡಿ ಕೇಂದ್ರಗಳ ಸಂಖ್ಯೆ ಮತ್ತು ಕೆಲಸದ ಸಮಯದ ಬಗ್ಗೆ ಮಾಹಿತಿ ಪಡೆದುಕೊಂಡರು. ತಹಶೀಲ್ದಾರ್ ಸುರೇಶ ಚವಲ್ಕರ್, ಪಿಎಸ್ಐ ನಚಿಕೇತ ಜನಗೌಡ, ಪಶು ಸಂಗೋಪನಾ ಎಡಿಎ ಡಾ. ಅನಂತಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಓಲೇಕಾರ್, ಮಹಮ್ಮದ್ ರಫೀಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.