
ಪ್ರಜಾವಾಣಿ ವಾರ್ತೆ
ಶಹಾಪುರ: ನಗರದ ಸಿದ್ದಲಿಂಗೇಶ್ವರ ಬೆಟ್ಟದ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ರುದ್ರಪಶುಪತೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಹಾಶಿವರಾತ್ರಿ ಉತ್ಸವ ಫೆ.16 ರಿಂದ ಜರುಗಲಿದೆ.
ಸೋಮವಾರ ಬೆಳಿಗ್ಗೆ 8ಗಂಟೆಗೆ ಸಿದ್ದಲಿಂಗೇಶ್ವರ ಲಿಂಗಕ್ಕೆ ರುದ್ರಾಭಿಷೇಕ,ಸಂಜೆ 6 ಗಂಟೆಗೆ ಶ್ರೀಗಳ ಪಾದಪೂಜೆ, ಮಂಟಪ ಪೂಜೆ ನಂತರ ಇಡೀ ರಾತ್ರಿ ಭಜನೆ, ಸಂಗೀತದ ಶಿವಯೋಗ ಜಾಗರಣೆ ನಡೆಯಲಿದೆ.
‘ಅಮವಾಸ್ಯೆ ದಿನವಾದ ಮಂಗಳವಾರ ಬೆಳಿಗ್ಗೆ 8ಗಂಟೆಗೆ ಸದ್ಗುರು ಗಂಗಾಧರ ಶಿವಯೋಗಿಗಳ ಹಾಗೂ ಶಂಕರಾನಂದ ಸ್ವಾಮೀಜಿಗಳ ಕತೃ ಗದ್ದುಗೆಗೆ ರುದ್ರಾಭಿಷೇಕ, ಪೂಜೆ,ಬಿಲ್ವಾರ್ಚನೆ ನಡೆಯಲಿದೆ. ಫೆ.20ರಂದು ಮಹಾಶಿವರಾತ್ರಿ ಮಹೋತ್ಸವ ಸಂಪನ್ನಗೊಳ್ಳಲಿದೆ’ ಎಂದು ಸಿದ್ದಲಿಂಗೇಶ್ವರ ಜನಕಲ್ಯಾಣ ಸಾಂಸ್ಕೃತಿಕ ಸೇವಾ ಟ್ರಸ್ಟ್ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.