ADVERTISEMENT

ಯಾದಗಿರಿ | ಬೈಕ್ ಡಿಕ್ಕಿ: ಚಿಕಿತ್ಸೆಗೆ ಸ್ಪಂದಿಸದೆ ಸಾವು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 7:30 IST
Last Updated 4 ಆಗಸ್ಟ್ 2025, 7:30 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಯಾದಗಿರಿ: ವಾಡಿ– ಯಾದಗಿರಿ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಬೈಕ್ ಡಿಕ್ಕಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ADVERTISEMENT

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗಂವ್ಹಾರ ನಿವಾಸಿ ಬಸಯ್ಯಸ್ವಾಮಿ ಮಸೂತಿಮಠ (36) ಮೃತರು.

ಮೃತರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ. ಬೈಕ್ ಸವಾರ ಉಮ್ಲಾನಾಯಕ ತಾಂಡಾದ ನಿವಾಸಿ ಸುನಿಲ್ ಪವಾರ್ (22) ವಿರುದ್ಧ ಯಾದಗಿರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂವ್ಹಾರದಿಂದ ಬಂದಿದ್ದ ಬಸಯ್ಯಸ್ವಾಮಿ ಅವರು ಅಬ್ಬೆ ತುಮಕೂರಿಗೆ ತೆರಳುತ್ತಿದ್ದರು. ಡಾನ್ ಬೋಸ್ಕೋ ಶಾಲೆ ಸಮೀಪದ ಯಾದಗಿರಿ– ವಾಡಿ ಮುಖ್ಯ ರಸ್ತೆ ಬದಿಯಲ್ಲಿ ನಿಂತಿದ್ದರು. ಸುನಿಲ್ ಅವರು ವೇಗವಾಗಿ ಮತ್ತು ಅಲಕ್ಷ್ಯತನದಿಂದ ಬೈಕ್ ಚಲಾಯಿಸಿಕೊಂಡು ಬಂದರು. ರಸ್ತೆ ಬದಿಯಲ್ಲಿ ನಿಂತಿದ್ದ ಬಸಯ್ಯಸ್ವಾಮಿ ಅವರಿಗೆ ಡಿಕ್ಕಿ ಹೊಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್ ಡಿಕ್ಕಿಯಿಂದ ನೆಲಕ್ಕೆ ಬಿದ್ದ ಬಸಯ್ಯಸ್ವಾಮಿ ಅವರ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿತ್ತು. ಎರಡೂ ಕೈಗಳಿಗೆ ತರಚಿದ, ಮೊಣಕಾಲುಗಳಿಗೆ ಸಣ್ಣ–ಪುಟ್ಟ ಗಾಯಗಳಾಗಿದ್ದವು. ಚಿಕಿತ್ಸೆಗೆ ಸ್ಪಂದಿಸದೆ ಯಾದಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಬೈಕ್ ಸವಾರ ಸಹ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಮರಳು‌ ಅಕ್ರಮ: ಇಬ್ಬರ ವಿರುದ್ಧ ಎಫ್‌ಐಆರ್‌

ಸುರಪುರ ತಾಲ್ಲೂಕಿನ ಹೇಮನೂರ ಚೆಕ್‌ಪೋಸ್ಟ್‌ ಸಮೀಪ ಅಕ್ರಮವಾಗಿ ಮರಳು ಸಾಗಣೆ ಮಾಡಿದ ಆರೋಪದಡಿ ಲಾರಿ ಮಾಲೀಕ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಹೇಮನೂರ ಚೆಕ್‌ ಪೋಸ್ಟ್‌ನಲ್ಲಿ ಮರಳು ತುಂಬಿದ ಟಿಪ್ಪರ್ ತಡೆದು ನಿಲ್ಲಿಸಲಾಯಿತು. ಟಿಪ್ಪರ್ ಚಾಲಕ ಮರಳಿನ ರಾಯಲ್ಟಿ ತುಂಬಿದ್ದರ ದಾಖಲಾತಿಯನ್ನು ತೋರಿಸಲಿಲ್ಲ. ಹೀಗಾಗಿ, ಶಹಾಪುರ ತಾಲ್ಲೂಕಿನ ಹೈಯಾಳ (ಕೆ) ಗ್ರಾಮದ ಚಾಲಕ ಬಾಳಪ್ಪ ತಿರುಪತಿ ಹಾಗೂ ಟಿಪ್ಪರ್ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.