ADVERTISEMENT

ಪುತ್ರಿಯೊಂದಿಗೆ ವಿವಾಹಿತ ಮಹಿಳೆ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 8:00 IST
Last Updated 14 ಸೆಪ್ಟೆಂಬರ್ 2020, 8:00 IST
ರೇಣುಕಾ ಮತ್ತು ಬಸಮ್ಮ
ರೇಣುಕಾ ಮತ್ತು ಬಸಮ್ಮ   

ಕಕ್ಕೇರಾ:ಪಟ್ಟಣದ ಸಮೀಪದಕೆರೆ ಜಂಪಾರದೊಡ್ಡಿಯ ವಿವಾಹಿತ ಮಹಿಳೆ 5 ವರ್ಷದ ಪುತ್ರಿಯೊಂದಿಗೆ ಸೆ.8ರಂದು ನಾತ್ತೆಯಾಗಿದ್ದಾರೆ.ರೇಣುಕಾ (27) ಬಸಮ್ಮ (5) ನಾಪತ್ತೆಯಾದವರು. ನಾಪತ್ತೆ ಪ್ರಕರಣಕೊಡೇಕಲ್ ಠಾಣೆಯಲ್ಲಿ ದಾಖಲಾಗಿದೆ.

ರೇಣುಕಾ 5ನೇ ತರಗತಿ ಶಾಲೆ ಕಲಿತಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಿದ್ದಾರೆ. ಸಾಧಾರಣ ಮೈಕಟ್ಟು, ಕೆಂಪುಬಣ್ಣ, ದುಂಡುಮುಖವಿದ್ದು, 5ಅಡಿಎತ್ತರವಿದ್ದು, ಇಲಕಲ್ ಸೀರೆ ಹಾಗೂ ಬಿಳಿ ಜಂಪಾರ ಉಡುಪು ಧರಿಸಿರುತ್ತಾರೆ. ಪುತ್ರಿ ಬಸಮ್ಮ ಗುಲಾಬಿ ಬಣ್ಣದ ಫ್ರಾಕ್ ಉಡುಪು ಧರಿಸಿರುತ್ತಾರೆ.

ಮಹಿಳೆ ಮತ್ತು ಹೆಣ್ಣು ಮಗು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆ ಹಾಗೂ 94808 03584, 97317 33800 ಮಾಹಿತಿ ಕೊಡಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.