ADVERTISEMENT

ಭೀಕರ ಪ‍್ರವಾಹ: ಜನಪ್ರತಿನಿಧಿಗಳು ನಾಪತ್ತೆ!

ಜನಜೀವನ ಅಸ್ತವಸ್ತ್ಯ, ತಿರುಗಿ ನೋಡದ ಅಧ್ಯಕ್ಷರು, ಸದಸ್ಯರು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 19:45 IST
Last Updated 7 ಆಗಸ್ಟ್ 2019, 19:45 IST
ಮಲ್ಲಿಕಾರ್ಜುನ ಸತ್ಯಂಪೇಟೆ, ರೈತ ಸಂಘ ಹಾಗೂ ಹಸಿರು ಸೇನೆ ವಿಭಾಗೀಯ ಕಾರ್ಯದರ್ಶಿ
ಮಲ್ಲಿಕಾರ್ಜುನ ಸತ್ಯಂಪೇಟೆ, ರೈತ ಸಂಘ ಹಾಗೂ ಹಸಿರು ಸೇನೆ ವಿಭಾಗೀಯ ಕಾರ್ಯದರ್ಶಿ   

ಯಾದಗಿರಿ: ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣ ನೀರು ಹರಿಸುತ್ತಿದ್ದು, ನದಿ ಪಾತ್ರದ ಹಳ್ಳಿಗಳ ಹೊಲ ಗದ್ದೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿದೆ.

ಮುಳುಗಡೆ ಭೀತಿ ಇರುವ ಗ್ರಾಮಗಳ ಜನರನ್ನು ಅಧಿಕಾರಿಗಳು ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ಕೆಲಸ ಮಾಡುತ್ತಿದ್ದು, ಜನರು ಇದಕ್ಕೆ ಒಪ್ಪುತ್ತಿಲ್ಲ. ತಮ್ಮ ಕ್ಷೇತ್ರದ ಜನರನ್ನು ಮನವೊಲಿಸಿ ಗಂಜಿ ಕೇಂದ್ರಗಳಿಗೆ ಕರೆ ತರುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದ್ದು, ಆದರೆ, ಅವರು ಇದರ ಗೋಜಿಗೆ ಹೋಗಿಲ್ಲ!

ಜಿಲ್ಲಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗುವುದು ಬಿಟ್ಟು ಕಾಲಹರಣ ಮಾಡುತ್ತಿದ್ದಾರೆ ಎಂದು ಜಿಲ್ಲೆಯ ಪ್ರಜ್ಞಾವಂತ ನಾಗರೀಕರು ಹೇಳುತ್ತಾರೆ.

ADVERTISEMENT

ನೆರೆ ಪ್ರವಾಹಕ್ಕೆ ಬರಲಿಲ್ಲ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಕೆಲ ದಿನಗಳಿಂದ ಹಿಂದೆ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಆದರೆ, ನೆರೆ ಪ್ರವಾಹಕ್ಕೆ ಬರಲಿಲ್ಲ ಎಂದು ಸುಭಾಷ ಐಕೂರ ಆರೋಪಿಸುತ್ತಾರೆ.

ಐಕೂರು– ಹಯ್ಯಾಳ ಗ್ರಾಮಗಳ ರಸ್ತೆ ನದಿ ನೀರಿನಿಂದ ಸಂಪರ್ಕ ಕಡೆದುಕೊಂಡಿದೆ. ಇದರಿಂದ ಜನರು ಹೊರಗಡೆ ಬರಲು ಹೆದರುತ್ತಿದ್ದಾರೆ. ಆದರೂ ಜನಪ್ರತಿನಿಧಿಗಳು ಜನರ ಸಮಸ್ಯೆ ಆಲಿಸದಿರುವುದು ಖಂಡನೀಯ ಎನ್ನುತ್ತಾರೆ ಅವರು.‌

ಮಂತ್ರಿ ಗಿರಿಗೆ ಒಡಾಡುತ್ತಿದ್ದಾರೆ: ಸಮ್ಮಿಶ್ರ ಸರ್ಕಾರವನ್ನು ಇಲ್ಲಿಯ ಶಾಸಕರು ರಾಜಧಾನಿಗೆ ತೆರಳಿ ಸುಮಾರು 20 ದಿನ ಇದ್ದು ಬಂದರು. ಈಚೆಗೆ ಜನರ ಕಣ್ಣೋರೆಸಲು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದರೆ ಹೊರೆತು ಜನರ ಕಷ್ಟ ಪರಿಹರಿಸುವ ಕೆಲಸ ಮಾಡಲಿಲ್ಲ ಎಂದು ಎಸ್‌ಯುಸಿಐ (ಕಮ್ಯುನಿಷ್ಟ್) ಜಿಲ್ಲಾ ಕಾರ್ಯದರ್ಶಿ ಸೋಮಶೇಖರ್‌ ಆಪಾದಿಸಿದರು.

ಮಂತ್ರಿಗಿರಿ ಪಡೆಯಲು ರಾಜಧಾನಿಯಲ್ಲಿ ಉಳಿದುಕೊಂಡು ಲಾಭಿ ಮಾಡುವ ಜಿಲ್ಲೆಯ ಶಾಸಕರು ಜನರ ಕಣ್ಣೀರು ಒರೆಸದಿರುವುದು ಖಂಡನೀಯ ಎಂದರು.

ಮಂತ್ರಿ ಮಂಡಲ ಇಲ್ಲ: ಬಿಜೆಪಿ ಸರ್ಕಾರ ರಚನೆಯಾಗಿ ಎರಡು ವಾರ ಕಳೆಯುತ್ತಿದ್ದರೂ ಮಂತ್ರಿ ಮಂಡಲ ರಚನೆಯಾಗದಿವುದರಿಂದ ಸಚಿವರು ಇಲ್ಲದೆ ಯಾವ ಕೆಲಸಗಳು ಪರಿಪೂರ್ಣವಾಗಿ ಆಗುತ್ತಿಲ್ಲ. ಇದರಿಂದ ಪ್ರವಾಹ ‍ಪೀಡಿತ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.