ADVERTISEMENT

ಸಮಾಜದಲ್ಲಿ ಮಾಧ್ಯಮಗಳ ಪಾತ್ರ ಹಾಗೂ ಜವಾಬ್ದಾರಿ ಗುರುತರ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 5:10 IST
Last Updated 4 ಫೆಬ್ರುವರಿ 2021, 5:10 IST
ಗುರುಮಠಕಲ್ ಪಟ್ಟಣದ ಖಾಸಾಮಠದಲ್ಲಿ ಬುಧವಾರ ನಡೆದ ಸನ್ಮಾನ ಕಾರ್ಯಕ್ರಮವನ್ನು ಖಾಸಾಮಠದ ಶ್ರೀ ಉದ್ಘಾಟಿಸಿದರು
ಗುರುಮಠಕಲ್ ಪಟ್ಟಣದ ಖಾಸಾಮಠದಲ್ಲಿ ಬುಧವಾರ ನಡೆದ ಸನ್ಮಾನ ಕಾರ್ಯಕ್ರಮವನ್ನು ಖಾಸಾಮಠದ ಶ್ರೀ ಉದ್ಘಾಟಿಸಿದರು   

ಗುರುಮಠಕಲ್: ‘ಸಮಾಜದಲ್ಲಿ ಮಾಧ್ಯಮಗಳ ಪಾತ್ರ ಹಾಗೂ ಜವಾಬ್ದಾರಿ ಗುರುತರವಾದುದ್ದು’ ಎಂದು ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀ ಅಭಿಪ್ರಾಯಪಟ್ಟರು.

ಪಟ್ಟಣದ ಖಾಸಾಮಠದಲ್ಲಿ ಬುಧವಾರ ಗುರುಮಠಕಲ್ ಮಾಧ್ಯಮ ಬಳಗ ಆಯೋಜಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಇಂದುಧರ ಸಿನ್ನೂರ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇಂದುಧರ ಸಿನ್ನೂರ್ ಅವರು ಅಧ್ಯಕ್ಷರಾಗಿದ್ದು ಸಂತಸದ ವಿಷಯ. ಮುಂದಿನ ದಿನಗಳಲ್ಲಿ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ’ ಎಂದು ಸಲಹೆ ನೀಡಿದರು.

ADVERTISEMENT

ಇಂದುಧರ ಸಿನ್ನೂರ್ ಮಾತನಾಡಿ,‘ಮುಂದಿನ ದಿನಗಳಲ್ಲಿ ಎಲ್ಲ ಪತ್ರಕರ್ತರಿಗೂ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವುದಾಗಿ’ ಭರವಸೆ ನೀಡಿದರು.

ಶಿರಸಂಗಿಯ ಬಸವ ಮಹಂತ ಶ್ರೀ, ಬಿ.ಜಿ.ಪ್ರವೀಣಕುಮಾರ, ಅನೀಲ್ ಬಸೂದೆ, ನರಸಿಂಹುಲು ಗಂಗನೋಳ, ಜನಸೇನಾ ಸಂಘಟನೆಯ ಸಾಯಿರೆಡ್ಡಿ, ಮಹೇಶಪಡಿಗೆ, ಗೋಪಾಲಕೃಷ್ಣ ಮೇಧಾ, ಮಹೇಶಗೌಡ, ಅಶೋಕ ಗೌಡ, ಆಟೊ ಚಾಲಕರ ಸಂಘದ ನಾರಾಯಣ, ಅಂಜಪ್ಪ ಹಾಗೂ ಗುರುಮಠಕಲ್ ಮಾಧ್ಯಮ ಬಳಗದ ಸದಸ್ಯರು ಇದ್ದರು.

ಎಂ.ಬಿ.ನಾಯ್ಕಿನ್ ಸ್ವಾಗತಿಸಿದರು. ಬಸಪ್ಪ ಸಂಜನೋಳ ಹಾಗೂ ಶಾಂತಕುಮಾರ ಸ್ವಾಮಿ ಪತ್ರಿಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.