
ಯಾದಗಿರಿ: ‘ಬಸವಾದಿ ಶರಣರಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರು ನೇರ, ನಿಷ್ಠುರವಾದಿಯಾಗಿದ್ದರು. ದೋಣಿ ಕಾಯಕ ಮಾಡುತ್ತಾ ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರಗಳ ನಿರ್ಮೂಲನೆಗಾಗಿ ಶ್ರಮಿಸಿದ್ದರು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.
ನಗರದ ವಿದ್ಯಾಮಂಗಲ್ ಕಾರ್ಯಾಲಯದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಿತಿ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತದ ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ 12ನೇ ಶತಮಾನದಲ್ಲಿ ಮುನ್ನುಡಿ ಬರೆದು, ಅದಕ್ಕೆ ಬುನಾದಿ ಹಾಕಿದವರು ಬಸವಾದಿ ಶರಣರು. ಬಸವಣ್ಣನ ನೇತೃತ್ವದ ವಚನ ಚಳವಳಿಯ ಹಲವು ಶರಣರಲ್ಲಿ ಅಂಬಿಗರ ಚೌಡಯ್ಯ ವಿಭಿನ್ನ ವ್ಯಕ್ತಿತ್ವದವರು. ತಮ್ಮದೆಯಾದ ನೇರ ದಾಟಿಯಲ್ಲಿ ವಚನಗಳನ್ನು ರಚಿಸಿದರು. ಸಮಾಜದಲ್ಲಿನ ಕಂದಾಚಾರ ತಿಳಿವಳಿಸುತ್ತಾ ಶರಣ ತತ್ವವನ್ನು ಪ್ರಚಾರಗೊಳಿಸಿದ್ದರು’ ಎಂದರು.
‘ಚೌಡಯ್ಯನವರ ವಚನಗಳು ಸಮಾಜಕ್ಕೆ ದಾರಿ ದೀಪವಾಗಿವೆ. ಸಮಾಜದಲ್ಲಿ ಮುಂದೆ ಬರಬೇಕಾದರೆ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಬೇಕು. ಜೊತೆಗೆ ಶರಣರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಪಾಲಿಸಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು’ ಎಂದು ಹೇಳಿದರು.
‘ಸಿಎಂ ಸಿದ್ದರಾಯ್ಯ ಅವರ ಸರ್ಕಾರವು ಸರ್ವ ಸಮಾಜಗಳಿಗೆ ಎಲ್ಲ ಬಗೆಯ ಸೌಕರ್ಯಗಳನ್ನು ನೀಡಿ ಸಹಾಯ ಮಾಡುತ್ತಿದೆ. ಅಂಬಿಗರ ಚೌಡಯ್ಯನವರ ಸಮಾಜಕ್ಕೆ ಅಗತ್ಯವಾದ ಸಹಕಾರ, ನೆರವು ನೀಡಲು ನಮ್ಮ ಸರ್ಕಾರದ ಗಮನಕ್ಕೆ ತಂದು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.
ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ ಆರ್.ಎಲ್.ಸುಣಗಾರ, ‘ಶರಣರ ವಚನಗಳು ಅನುಭವದಿಂದ ಹೊರಬಂದಿದ್ದು, ಸತ್ಯದ ವಿಚಾರಗಳೂ ಒಳಗೊಂಡಿದ್ದರಿಂದ ಅವುಗಳಿಗೆ ಹೆಚ್ಚಿನ ತೂಕವಿದೆ. ಜೊತೆಗೆ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿ ಶೋಷಿತರಿಗೆ ಹೊಸ ಬದುಕಿನ ದಿಕ್ಕು ತೋರಿಸಿವೆ. ಚೌಡಯ್ಯ ಅವರ ವಚನಗಳಲ್ಲಿ ನೇರವಾಗಿ ಹೇಳುವ ಸ್ವಭಾವ ಕಾಣುತ್ತೇವೆ’ ಎಂದರು.
ಕಾರ್ಯಕ್ರಮದಲ್ಲಿ ಎಸ್ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ‘ಯುಡಾ’ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ, ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪುರ, ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗೋಸಿ, ಸಮಾಜದ ಮುಖಂಡರಾದ ಆಶಪ್ಪ ಗಾಜರಕೋಟ, ನಾಗರತ್ನ ಅನಪುರ, ಬವರಾಜ ಬಾಗಲಿ, ವೆಂಕಟೇಶ್, ಭೀಮರೆಡ್ಡಿ ಯರಗೋಳ ಸೇರಿ ಹಲವರು ಉಪಸ್ಥಿತರಿದ್ದರು.
ನಗರದ ಗಂಜ್ ಸರ್ಕಲ್ ಸಮೀಪದ ಅಂಬಿಗರ ಚೌಡಯ್ಯ ಕಟ್ಟೆ ಬಳಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಅಂಬಿಗರ ಚೌಡಯ್ಯ ಅವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು. ಅಂಬಿಗರ ಚೌಡಯ್ಯ ಭಾವಚಿತ್ರವಿರುವ ಶಾಲು ಕೊರಳಲ್ಲಿ ಹಾಕಿಕೊಂಡು ಬಿಸಿಲೂ ಲೆಕ್ಕಿಸದೆ ಸಮಾಜದ ಮುಖಂಡರು ನೂರಾರು ಜನರು ಹೆಜ್ಜೆ ಹಾಕಿದರು. ಡೊಳ್ಳು ಅಲಗೆಯ ವಾದನ ಲಂಬಾಣಿ ಕುಣಿತವು ಗಮನ ಸೆಳೆಯಿತು.
ವಡಗೇರಾ: ಶಿವಶರಣರ ಜಯಂತಿಗಳನ್ನು ಆಚರಿಸಿದರೆ ಸಾಲದು. ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗಳ ಮೌಲ್ಯ ಹೆಚ್ಚುತ್ತದೆ’ ಎಂದು ತಹಶೀಲ್ದಾರ್ ಮಂಗಳಾ ಎಂ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಅವರಣದಲ್ಲಿ ತಾಲ್ಲೂಕಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ದಲಿತ ಸಾಹಿತಿ ಹಾಗೂ ಉಪನ್ಯಾಸಕ ಮರಿಯಪ್ಪ ನಾಟೇಕಾರ, ಕೊಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಬಸವರಾಜ ಕೊಲ್ಕರ್ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ ತಮ್ಮಣ್ಣೋರ, ಜಿಪಂ ಮಾಜಿ ಸದಸ್ಯ ಸಿದ್ದಣ್ಣಗೌಡ ಕಾಡಂನೋ, ಎಪಿಎಂಸಿ ಮಾಜಿ ತಾಲ್ಲೂಕು ಅದ್ಯಕ್ಷ ಅಯ್ಯಪ್ಪ ಹಾಲಗೇರಾ, ಬಾಷುಮಿಯಾ ನಾಯ್ಕೋಡಿ, ಗ್ರೇಡ್ -2 ತಹಶೀಲ್ದಾರ್ ಪ್ರಕಾಶ ಹೊಸಮನಿ ಶೀರಸ್ತೆದಾರ್ ರಾಮನಗೌಡ, ಸಂಗಮೇಶ ನಾಯಕ, ಕಂದಾಯ ನಿರೀಕ್ಷಕ ಬಸಯ್ಯಸ್ವಾಮಿ, ಗ್ರಾಮ ಆಡಳಿತ ಅಧಿಕಾರಿ ಸಂತೋಷ, ಶಾಂತಪ್ಪ ಗೊಂದೇನೂರ, ಸೈದಣ್ಣ ಶಿವಪುರ, ಅಯ್ಯಪ್ಪ ನಾಯ್ಕೋಡಿ, ರಾಜಶೇಖರ ಕಲ್ಮನಿ, ಸಿದ್ದಪ್ಪ ನಾಟೇಕಾರ, ಚೌಡಯ್ಯ, ಭೀಮಣ್ಣ , ರಾಮು ನಾಟೇಕಾರ, ದಂಡಪ್ಪಉಪಸ್ಥಿತರಿದ್ದರು.
ಯಾದಗಿರಿ: ನಗರದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತ್ಯುತ್ಸವ ಅಂಗವಾಗಿ ಅಂಬಿಗರ ಚೌಡಯ್ಯನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.
ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ವಿಶ್ವರಾಜ ಪಾಟೀಲ ಮಾತನಾಡಿ, ‘ಅಂಬಿಗರ ಚೌಡಯ್ಯ ಅವರು ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದವರು. ನೇರ, ನಿರ್ಭಿತ ನುಡಿಗಳಿಂದ ವಚನಗಳನ್ನು ರಚಿಸಿದ್ದು, ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡಿದ್ದರು’ ಎಂದರು.
ಸಂಘಟನೆಯ ಮುಖಂಡರಾದ ಅಶೋಕನಾಯಕ, ಸಿದ್ದಪ್ಪ ಕೂಯಿಲೂರ, ಸಿದ್ದಲಿಂಗರೆಡ್ಡಿ ಮುನಗಲ್, ಮಹೇಶ ಠಾಣಗುಂದಿ, ನಾಗು ತಾಂಡರೂಕರ್, ಬಸವರಾಜ ಜಗನ್ನಾಥ್, ಕಾಶಿನಾಥ ನಾನೇಕ, ನಾಗರಾಜ ಪಲ್ಲಿ, ನಾಗಪ್ಪ ನಕ್ಕಲ್, ಸಿದ್ದು ರಾಮಸಮುದ್ರ, ನಾಗು ಕಟ್ಟಿಮನಿ, ಮಂಜು ನಾಲವಾರ, ಶಿವುಕುಮಾರ ಠಾಣಗುಂದಿ, ಜಟ್ಟೆಪ್ಪ ಬೆನ್ನನೋರ್, ರಮೇಶ.ಡಿ.ನಾಯಕ ಸೇರಿ ಇತರರು ಉಪಸ್ಥಿತರಿದ್ದರು.
ಸೈದಾಪುರ: ‘ಸಮಾಜದಲ್ಲಿನ ಮೂಢನಂಬಿಕೆಯ ಅಂಧಕಾರವನ್ನು ಹೋಗಲಾಡಿಸಲು ನೇರ ಮತ್ತು ನಿಷ್ಠುರದ ನುಡಿಗಳ ಮೂಲಕ ಕ್ರಾಂತ್ರಿಯನ್ನೇ ಮಾಡಿದ ಶ್ರೇಷ್ಠ ವಚನಕಾರ ನಿಜ ಶರಣ ಅಂಬಿಗರ ಚೌಡಯ್ಯ’ ಎಂದು ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ 906ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹೇಶ್ವರಿ, ಮರಿಲಿಂಗಮ್ಮ, ಮಹಾಲಕ್ಷ್ಮೀ, ಸ್ವಾತಿ, ಶ್ರೀದೇವಿ, ಸನಾ, ನಸರಮ್ಮ, ಮಹೇಶ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.
ಸುರಪುರ: ‘ತಮ್ಮ ವಚನಗಳ ಮೂಲಕ ತಾರತಮ್ಯ ನೀತಿಗಳ ವಿರುದ್ಧ ಹೋರಾಡಿ, ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿ ಸಮಾನತೆ ಸಾರಿದ ಅಂಬಿಗರ ಚೌಡಯ್ಯ 12ನೇ ಶತಮಾನದ ಶ್ರೇಷ್ಠ ಶರಣರಾಗಿದ್ದಾರೆ’ ಎಂದು ತಹಶೀಲ್ದಾರ್ ಎಚ್.ಎ.ಸರಕಾವಸ್ ಹೇಳಿದರು.
ಬೋಯಿಗಲ್ಲಿ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ತಾಲ್ಲೂಕು ಆಡಳಿತ ಬುಧವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯನವರ 906 ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರನಾಯಕ, ಪತ್ರಾಂಕಿತ ಉಪ ಖಜಾನಾಧಿಕಾರಿ ಸಣಕ್ಕೆಪ್ಪ ಕೊಂಡಿಕಾರ, ಸರ್ಕಾರಿ ವಕೀಲ ನಂದಣ್ಣ ಬಾಕ್ಲಿ ಮಾತನಾಡಿದರು.
ತಾಲ್ಲೂಕು ಕೋಲಿ ಗಂಗಾಮತ ಸಮಾಜದ ಅಧ್ಯಕ್ಷ ದೇವಿಂದ್ರಪ್ಪಗೌಡ ಮಾಲಿ ಪಾಟೀಲ ದೇವರಗೋನಾಲ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ನಗರಸಭೆ ಸದಸ್ಯ ಮಾನಪ್ಪ ಚಳ್ಳಿಗಿಡ, ನಿವೃತ್ತ ಎಸ್‍ಟಿಒ ಶಿವಪ್ಪ ಕಟ್ಟಿಮನಿ ವೇದಿಕೆಯಲ್ಲಿದ್ದರು.
ಸಮಾಜದ ಮುಖಂಡರಾದ ಯಂಕಣ್ಣ ಕಟ್ಟಿಮನಿ, ಹಣಮಂತ ಯಲಗೋಡ, ಮರೆಪ್ಪ ದಾಯಿ, ಭಂಡಾರೆಪ್ಪ ನಾಟೇಕರ್, ವೆಂಕಾರೆಡ್ಡಿ ಬೋಯಿ, ಯಲ್ಲಪ್ಪ ರತ್ತಾಳ, ದೇವಿಂದ್ರಪ್ಪ, ಹಣಮಂತ, ವೆಂಕಟೇಶ ಕವಡಿಮಟ್ಟಿ ಸೇರಿದಂತೆ ಗಂಗಾಮತ ಸಮಾಜದ ಅನೇಕ ಬಾಂಧವರು ಭಾಗವಹಿಸಿದ್ದರು. ಮಾನಪ್ಪ ಸುಗೂರು ನಿರೂಪಿಸಿ ವಂದಿಸಿದರು.
ಹುಣಸಗಿ: ‘ನಮ್ಮ ಶರೀರದಲ್ಲಿ ಪ್ರಾಣ ಇರುವವರೆಗೂ ಶಿವಭಕ್ತಿಯೊಂದಿಗೆ ಸತ್ಯ ಸದಾಚಾರದಲ್ಲಿ ನಡೆಯುವಂತಾಗಲು ನಿಜ ಶರಣ ಅಂಬಿಗರ ಚೌಡಯ್ಯ ನವರ ವಚನಗಳು ಮುಕ್ತಿ ಮಾರ್ಗ ತೋರಿಸುತ್ತವೆ’ ಎಂದು ಉಪನ್ಯಾಸಕ ಸಂಗಮೇಶ ರಡ್ಡಿ ಹೇಳಿದರು.
ಹುಣಸಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ನಿಜ ಶರಣ ಅಂಬಿಗರ ಚೌಡಯ್ಯ ನವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಪಂ ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ಮಾತನಾಡಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗುಳಬಾಳದ ಮರಿಹುಚ್ಚೇಶ್ವರ ಸ್ವಾಮೀಜಿ ಹಾಗೂ ಮುದನೂರು ಕಂಠಿ ಮಠದ ಸಿದ್ಧ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ ಶರಣ ಜೀವನ ಮತ್ತು ತತ್ವಗಳ ಕುರಿತು ಮಾತನಾಡಿದರು.
ಅಧ್ಯಕ್ಷತೆಯನ್ನು ಸಮಾಜದ ಹಿರಿಯರಾದ ನಿಂಗಣ್ಣ ಡಂಗಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದ್ಯರಾದ ಸಿದ್ದಣ್ಣ ಮಲಗಲದಿನ್ನಿ, ಬಸವರಾಜ ಮಲಗಲದಿನ್ನಿ, ಪಪಂ ಸದಸ್ಯರಾದ ಸಿದ್ದು ಮುದಗಲ್ಲ, ಅಮರಣ್ಣ ದೇಸಾಯಿ, ಪಪಂ ಅಧ್ಯಕ್ಷ ತಿಪ್ಪಣ್ಣನಾಯಕ, ಬಸವರಾಜ ಸಜ್ಜನ, ಬಾಪುಗೌಡ ಪಾಟೀಲ, ಮಹಾಂತೇಶ ಮಲಗಲದಿನ್ನಿ, ಮಲ್ಲು ಹೆಬ್ಬಾಳ, ರಾಜಶೇಖರ ದೇಸಾಯಿ, ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು.
ಮುಖಂಡರಾದ ವಿರೇಶ ಚಿಂಚೋಳಿ, ಶರಣು ದಂಡಿನ್, ಮೇಲಪ್ಪ ಗುಳಗಿ, ಶಿವನಗೌಡ ಪಾಟೀಲ, ಶಾಂತಪ್ಪ ಬಾಕಲಿ ಬಸವರಾಜ ಹಂಚಲಿ, ಮಲ್ಲಣ್ಣ ಡಂಗಿ, ಬಸನಗೌಡ ಪಾಟೀಲ, ಮಲ್ಲು ಬಾಕಲಿ, ಸೈದಪ್ಪ ತಾಳಿಕೋಟಿ, ಯಂಕಣ್ಣ ಬಾಕಲಿ, ಸಂತೋಷ ಡಂಗಿ, ಗಂಗಾಧರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಕಾಳಿಕಾ ದೇವಸ್ಥಾನವರೆಗೆ ಅಲಂಕೃತ ವಾಹನದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮಹಿಳೆಯರ ಪೂರ್ಣ ಕುಂಭ , ಕಳಸ ಹಾಗೂ ಯುವಕರ ನೃತ್ಯ ಗಮನ ಸಳೆಯಿತು.
ಶಿಕ್ಷಕ ಅಮರೇಶ ಬಾಕಲಿ ನಿರೂಪಿಸಿದರು. ಮಲ್ಲು ದ್ಯಾಪುರ ಸ್ವಾಗತಿಸಿದರು. ಶ್ರೀಕಾಂತ ನಾಗರಾಳ ವಂದಿಸಿದರು.
ಶಹಾಪುರ: ‘ವೈಚಾರಿಕ ಪ್ರಜ್ಞೆಯಿಂದ ಜನ ಸಮೂಹದ ಮೌಢ್ಯವನ್ನು ಹೊಡೆದೋಡಿಸಿದ ಮಹನೀಯರಲ್ಲಿ ಅಂಬಿಗರ ಚೌಡಯ್ಯ ಪ್ರಮುಖರು ಆಗಿದ್ದಾರೆ’ ಎಂದು ಉಪ ಖಜಾನೆ ಅಧಿಕಾರಿ ಎಂ.ಎಸ್. ಶಿರವಾಳ ತಿಳಿಸಿದರು.
ಇಲ್ಲಿನ ನಗರಸಭೆ ಕಚೇರಿ ಆವರಣದಲ್ಲಿ ಬುಧವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರೇಡ್-2 ತಹಶೀಲ್ದಾರ್ ಪ್ರಸನ್ನಕುಮಾರ, ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ರಾಯಪ್ಪ ಸಾಲಿಮನಿ ಹಾಗೂ ಮುಖಂಡರಾದ ಅಯ್ಯಣ್ಣ ಕನ್ಯಾಕೊಳ್ಳೂರ, ಮಹಾದೇವಪ್ಪ ಸಾಲಿಮನಿ, ಗಿರೆಪ್ಪಗೌಡ ಬಾಣತಿಹಾಳ, ಶಿವುಮಹಾಂತ ಚಂದಾಪುರ, ಶರಣು ಗದ್ದುಗೆ, ಗೋವಿಂದರಾಜ ಸುರಪುರ್, ನೀಲಕಂಠ ಬಡಿಗೇರ, ಭೀಮಣ್ಣ ಶಖಾಪುರ, ಮರೆಪ್ಪ ಪ್ಯಾಟಿ, ಶಿವುಪುತ್ರ ಜವಳಿ, ಬಸವರಾಜ ಕೋರಿ, ಬಸ್ಸು ರತ್ತಾಳ, ಮಾನಪ್ಪ ಮುಡಬೂಳ, ರವಿನರಸನಾಯಕ, ಅಂಬ್ಲಪ್ಪ, ಯಲ್ಲಪ್ಪ ನಾಯ್ಕೋಡಿ, ವೆಂಕಟೇಶ ಬೋನೆರ, ರಾಮಾಂಜನೇಯ, ದೇವಪ್ಪ ಸುರಪುರಕರ್ ಭಾಗವಹಿಸಿದ್ದರು.
ಇದಕ್ಕೂ ಮೊದಲು ನಗರದ ಚರಬಸವೇಶ್ವರ ಕಮಾನ್ ನಿಂದ ಬಸವೇಶ್ವರ ವೃತ್ತದ ವರೆಗೆ ಅದ್ಧೂರಿ ಮೆರವಣಿಗೆ ನಡೆಯಿತು.
ಕಕ್ಕೇರಾ: ಬಸವಾದಿ ಶರಣರ ಕಾಲದ ನಿಜಶರಣ ಅಂಬಿಗರ ಚೌಡಯ್ಯನವರು ಸಮಾಜದಲ್ಲಿನ ಮೌಡ್ಯ, ಕಂದಾಚಾರಗಳನ್ನು ತೊಲಗಿಸಲ ನಿಷ್ಠುರವಾದಿಗಳಾಗಿ ಸಾಮಾಜಿಕ ಬದಲಾವಣೆಯ ಹರಿಕಾರ ಆಗಿದ್ದರು’ ಎಂದು ಪುರಸಭೆ ಸದಸ್ಯ ಪರಮಣ್ಣ ಕಮತಗಿ ಹೇಳಿದರು.
ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಸ್ಥಳೀಯ ಕೋಲಿ ಗಂಗಾಮತ ಸಮಾಜದ ವತಿಯಿಂದ ಆಚರಿಸಲ್ಪಟ್ಟ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ನಿವೃತ್ತ ಸುಂಕದ್ ಅಧಿಕಾರಿ ಮಾನಯ್ಯ ಭೋಯಿ ಮಾತನಾಡಿದರು.
ನಂದಣ್ಣಪ್ಪ ಪೂಜಾರಿ ಶ್ರೀ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.
ಪ್ರಮುಖರಾದ ಪರಮಣ್ಣ ತೇರಿನ್ ಗುಂಡಪ್ಪ ಸೊಲ್ಲಾಪೂರ, ರಮೇಶ ಶೆಟ್ಟಿ, ಲಕ್ಷ್ಮಣ ಲಿಂಗದಳ್ಳಿ, ಬಸಯ್ಯಸ್ವಾಮಿ, ಜಟ್ಟೆಪ್ಪ ದಳಾರ್, ಅಯ್ಯಾಳಪ್ಪ ಪೂಜಾರಿ, ರಾಜೂ ಹವಾಲ್ದಾರ್, ಸೋಮನಾಥ ಸೋಲಾಪುರ, ಚಿದಾನಂದ ಕಮತಗಿ, ಸಿದ್ದಪ್ಪ ಅಗ್ನಿ, ಸಮಾಜದ ಅಧ್ಯಕ್ಷ ಅಮರೇಶ ತೇರಿನ್ ತಿಪ್ಪಣ್ಣ ಜಂಪಾ, ಶಾಂತಪ್ಪ ತಾಳಿಕೋಟಿ, ಭೀಮಣ್ಣ ಜಂಪಾ, ಸಂಗಣ್ಣ ಸುಬೇದಾರ್, ಆನಂದ ಭೋಯಿ, ಮೈಹಿಬೂಬ ಸುರಪುರ, ಬಸವರಾಜ ಹೊಸ್ಮನಿ, ಸಮಾಜದ ಅನೇಕರು ಹಾಜರಿದ್ದರು.
ಗುರುಮಠಕಲ್: ತಾಲ್ಲೂಕಿನ ಶಾಲಾ-ಕಾಲೇಜು, ಆಸ್ಪತ್ರೆ, ಸರ್ಕಾರಿ ಕಚೇರಿ, ಕೋಲಿ ಕಬ್ಬಲಿಗ ಸಮಾಜ, ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಿತಿಗಳು ಪಟ್ಟಣ ಸೇರಿದಂತೆ ವಿವಿಧೆಡೆ ಬುಧವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.
ಕೋಲಿ ಕಬ್ಬಲಿಗ ಸಮಾಜದ ವತಿಯಿಂದ ಬುಧವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಿನ್ನಲೆ ಪಟ್ಟಣದ ಗಾಂಧಿ ಮೈದಾನದಿಂದ ಬಸ್ ನಿಲ್ದಾಣದ ಎದುರಿಗಿನ ಅಂಬಿಗರ ಚೌಡಯ್ಯ ವೃತ್ತದವರೆಗೆ ಅಂಬಿಗರ ಚೌಡಯ್ಯ ಅವರ ಭಾವಚಿತ್ರದ ಮೆರವಣಿಗೆ ಜರುಗಿತು.
ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಹಾಗೂ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಮೆರವಣಿಗೆಗೆ ಚಾಲನೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಉತ್ಸವ ಸಮಿತಿ ಅಧ್ಯಕ್ಷ ಅಶೋಕ ಸಂಜನೋಳ, ನರಸರೆಡ್ಡಿ ಪಾಟೀಲ ಗಡ್ಡೆಸೂಗೂರ, ಪ್ರಕಾಶ ನಿರೇಟಿ, ನಾಗಭೂಷಣ ಆವಂಟಿ, ಸಂತೋಷ ನಿರೇಟಿ, ಸೂರ್ಯನಾರಾಯಣ ನಿರೇಟಿ, ಪಾಪಣ್ಣ ಮನ್ನೆ, ನಿವೃತ್ತ ಎಎಸ್‌ಐ ತಿಮ್ಮಪ್ಪ, ಕಾಶಪ್ಪ ಮನ್ನೆ, ವೆಂಕಟಪ್ಪ ಅವಂಗಪುರ, ಬಸಣ್ಣ ದೇವರಳ್ಳಿ, ಬಸಣ್ಣ ಅರೆಬಿಂಜರ, ಅನಂತಪ್ಪ ಯದ್ಲಾಪುರ, ಮಲ್ಲಿಕಾರ್ಜುನ ಹಿರೇಮಠ, ಭಾಸ್ಕರ ಪುರುಷೋತ್ತಮ, ನರಸಿಂಹುಲು ಗಂಗನೋಳ, ಹಣಮಂತು ಸೇರಿದಂತೆ ಕಬ್ಬಲಿಗ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಕೊಂಕಲ್: ತಾಲ್ಲೂಕಿನ ಕೊಂಕಲ್ ಗ್ರಾಮದಲ್ಲಿ ಬುಧವಾರ ಅಂಬಿಗರ ಚೌಡಯ್ಯ ಜಯಂತಿ ಹಿನ್ನಲೆ ಅಂಬಿಗರ ಚೌಡಯ್ಯ ವೃತ್ತದ ನಾಮಫಲಕ ಮತ್ತು ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಆನಂದ ಶಿಲಾ, ಚಂದ್ರಪ್ಪ, ಶಿವಪ್ಪ, ಬಾಬು, ಜಗಪ್ಪ, ಬಿ ಜಗ್ಗಪ್ಪ, ವೆಂಕಟೇಶ, ಸಾಬಣ್ಣ, ನಿಂಗಪ್ಪ, ಬಸವರಾಜ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.