ADVERTISEMENT

‘ಮಕ್ಕಳು ಮೊಬೈಲ್ ಗೀಳು ಬಿಡಲಿ’

ಸುರಪುರ: ಜಾಣ ಜಾಣೆಯರ ಮಾಲಿಕೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 9:01 IST
Last Updated 13 ಡಿಸೆಂಬರ್ 2019, 9:01 IST
ಸುರಪುರದ ಗಂಗೋತ್ರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಜಾಣ ಜಾಣೆಯರ ಮಾಲಿಕೆ ಕಾರ್ಯಕ್ರಮ ಜರುಗಿತು
ಸುರಪುರದ ಗಂಗೋತ್ರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಜಾಣ ಜಾಣೆಯರ ಮಾಲಿಕೆ ಕಾರ್ಯಕ್ರಮ ಜರುಗಿತು   

ಸುರಪುರ: ‘ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಸಮಯ ಸಿಕ್ಕಾಗ ಕೃತಿಗಳನ್ನು ಓದಬೇಕು. ಬರೆಯುವುದನ್ನು ರೂಢಿಸಿಕೊಳ್ಳಬೇಕು’ ಎಂದು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬೀರಣ್ಣ ಆಲ್ದಾಳ ಹೇಳಿದರು.

ಹನಸಾಪುರದ ಗಂಗೋತ್ರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿದ್ದ ಜಾಣ ಜಾಣೆಯರ ಬಳಗ 2019-20ರ ಅಡಿಯಲ್ಲಿ ನನ್ನ ಮೆಚ್ಚಿನ ಪುಸ್ತಕ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಥೆ, ಕವನ, ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಪುಸ್ತಕಗಳು ವಿಮರ್ಶೆ ಗೊಳಪಟ್ಟು ಬಹುಮಾನ ಪಡೆದಾಗ ಆಗುವ ಆನಂದವೇ ಅನನ್ಯ’ ಎಂದರು.

ADVERTISEMENT

ಉಪನ್ಯಾಸಕಿ ಫೌಜಿಯಾ ಬೇಗಂ ಮಾತನಾಡಿ, ‘ ನಾಡಿನ ಸಾಹಿತ್ಯ, ಭಾಷೆ, ಕಲೆ, ಸಂಸ್ಕೃತಿ ಅರಿಯಬೇಕು’ ಸಲಹೆ ನೀಡಿದರು.

ಜಾಣ ಜಾಣೆಯರ ಬಳಗದ ಸಂಚಾಲಕ ಡಾ. ಸುರೇಶ ಮಾಮಡಿ ಮಾತನಾಡಿ, ‘ಕನ್ನಡ ಪುಸ್ತಕ ಪ್ರಾಧಿಕಾರಿ ವಿದ್ಯಾರ್ಥಿಗಳಲ್ಲಿ ಇಂದು ಸಾಹಿತ್ಯ ಅಭಿರುಚಿ ಕಡಿಮೆ ಆಗಿದೆ. ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಯುವ ಸಮುದಾಯದಲ್ಲಿ ಸಾಹಿತ್ಯ ಆಸಕ್ತಿ ಬೆಳೆಸಲು ಒಳ್ಳೆಯ ಯೋಜನೆಯನ್ನು ಜಾರಿಗೊಳಿಸಿದೆ. ಹೆಚ್ಚೆಚ್ಚು ಕೃತಿಗಳ ಓದುವ ಮೂಲಕ ಇದನ್ನು ಸದುಪಯೋಗ ಮಾಡಿಕೊಳ್ಳುವಂತೆ’ ತಿಳಿಸಿದರು.

ಪ್ರಾಚಾರ್ಯ ಜ್ಯೋತಿಬಾಯಿ ಮಾಮಡಿ ಅಧ್ಯಕ್ಷತೆ ವಹಿಸಿದ್ದರು. ಮಮತಾ ಸಂಗಡಿಗರು ಸ್ವಾಗತಿಸಿದರು. ಉಪನ್ಯಾಸಕಿ ಚಂದ್ರಬಾಗಮ್ಮ ನಿರೂಪಿ ಸಿದರು. ಮಲ್ಲಿಕಾರ್ಜುನ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.