ADVERTISEMENT

ಜ್ಞಾನದ ಜ್ಯೋತಿ ಬೆಳಗುವ ಮಠಗಳು: ಶರಣಗೌಡ ಕಂದಕೂರ

ಹುಟ್ಟುಹಬ್ಬಕ್ಕೆ ಶುಭ ಕೋರಿ, ಆಶೀರ್ವಾದ ಪಡೆದ ಶರಣಗೌಡ ಕಂದಕೂರ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 16:42 IST
Last Updated 30 ಆಗಸ್ಟ್ 2021, 16:42 IST
ಯಾದಗಿರಿ ಸಮೀಪದ ನೆರಡಗಂ ಪಂಚಮ ಸಿದ್ಧಲಿಂಗ ಸ್ವಾಮೀಜಿ ಜನ್ಮದಿನದ ನಿಮಿತ್ತ ಜೆಡಿಎಸ್ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ಭೇಟಿ ನೀಡಿ ಶ್ರೀಗಳಿಗೆ ಶುಭ ಕೋರಿದರು. ಖಾಸಾಮಠದ ಮುರುಘರಾಜೇಂದ್ರ ಸ್ವಾಮೀಜಿ, ಶಂಭುಲಿಂಗ ಶ್ರೀ ಇದ್ದರು
ಯಾದಗಿರಿ ಸಮೀಪದ ನೆರಡಗಂ ಪಂಚಮ ಸಿದ್ಧಲಿಂಗ ಸ್ವಾಮೀಜಿ ಜನ್ಮದಿನದ ನಿಮಿತ್ತ ಜೆಡಿಎಸ್ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ಭೇಟಿ ನೀಡಿ ಶ್ರೀಗಳಿಗೆ ಶುಭ ಕೋರಿದರು. ಖಾಸಾಮಠದ ಮುರುಘರಾಜೇಂದ್ರ ಸ್ವಾಮೀಜಿ, ಶಂಭುಲಿಂಗ ಶ್ರೀ ಇದ್ದರು   

ಯಾದಗಿರಿ: ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಪೂಜ್ಯರ ಕಾರ್ಯ ಸಾಧನೆ ಶ್ಲಾಘನೀಯ ಎಂದು ಜೆಡಿಎಸ್ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮೀಪದ ನೆರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಪೀಠಾಧಿಪತಿ ಪಂಚಮ ಸಿದ್ಧಲಿಂಗ ಸ್ವಾಮೀಜಿ 31ನೇ ವರ್ಷದ ಜನ್ಮದಿನದ ನಿಮಿತ್ತ ಶ್ರೀಗಳಿಗೆ ಸನ್ಮಾನಿಸಿ, ಆಶೀರ್ವಾದ ಪಡೆದು ಮಾತನಾಡಿದ ಅವರು ಅನಾದಿ ಕಾಲದಿಂದಲೂ ಮಠ, ಮಂದಿರಗಳು ಜನರ ಏಳ್ಗೆಗಾಗಿ ಶ್ರಮಿಸುವ ಮೂಲಕ ಅಜ್ಞಾನವೆಂಬ ಅಂಧಕಾರ ಅಳಿಸಿ ಜ್ಞಾನದ ಜ್ಯೋತಿ ಬೆಳಗುತ್ತಿವೆ ಎಂದರು.

ಸಾಮಾಜಿಕ ಸುಧಾರಣೆಯಲ್ಲಿ ಮಠಾಧೀಶರ ಪಾತ್ರ ಅತಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ನೆರಡಗಂ ಮಠದ ಪಂಚಮ ಸಿದ್ದಲಿಂಗ ಶ್ರೀ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವರ್ಷದುದ್ದಕ್ಕೂ ಹಮ್ಮಿಕೊಳ್ಳುವ ಮೂಲಕ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಭಕ್ತರ ಆಶಾಕಿರಣವಾಗಿದ್ದಾರೆ ಎಂದು ಕೊಂಡಾಡಿದರು.

ADVERTISEMENT

ಈ ವೇಳೆ ಗುರುಮಠಕಲ್ ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಶಂಭುಲಿಂಗ ಸ್ವಾಮೀಜಿ ಕಲ್ಲೂರು, ಮುಖಂಡರಾದ ಶಿವರಾಜ್ ಪಾಟೀಲ ಗುರ್ಜಾಲ್, ಗುರುಪ್ರಸಾದ, ಬಂದಪ್ಪಗೌಡ ಲಿಂಗೇರಿ, ಡಾ. ಸುರಗಿಮಠ, ಚಂದ್ರು ಯಾದವ, ನರಸಪ್ಪ ಕವಡೆ ಬದ್ದೇಪಲ್ಲಿ, ಡಿ.ತಾಯಪ್ಪ, ಜಗದೀಶ ಕಲಾಲ್, ಶಂಕರ ಪೂಜಾರಿ, ರಕ್ತದಾನಿ ರಾಘವೇಂದ್ರ ಕಲಾಲ್ ಸೈದಾಪುರ, ನರಸಿಂಹ ಪೂಜಾರಿ, ಮಲ್ಲು ಪಾಟೀಲ, ರಮೇಶ ಕುಂಬಾರ, ಶರಣಯ್ಯ ಸ್ವಾಮಿ ಕೂಡ್ಲೂರು, ಮಲ್ಲೇಶ ನಾಯಕ, ಲಕ್ಷ್ಮಣ ನಾಯಕ, ಅಮರೇಶ ನಾಯಕ, ಮಿರಾನ್ ಸಾಬ, ಮಹಾದೇವಪ್ಪ ಕಾವಲಿ, ಶಿವುಕುಮಾರ ಆವಂಟಿ ಇಡ್ಲೂರು, ನಾಗೇಂದ್ರ ನಾಯಕ, ಶಂಕರ ಹಡಪದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.