ADVERTISEMENT

ಒಡವೆಗಾಗಿ ಜಗಳ: ಕೊಲೆಯಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 9:01 IST
Last Updated 7 ಜುಲೈ 2021, 9:01 IST

ಹುಣಸಗಿ: ಬಂಗಾರದ ಒಡವೆಯನ್ನು ಒತ್ತೆ ಇಟ್ಟುಕೊಂಡ ವಿಷಯದ ಕುರಿತಂತೆ ಆರಂಭವಾದ ಜಗಳ ಕೊಲೆಯೊಂದಿಗೆ ಅಂತ್ಯವಾದ ಘಟನೆ ಸೋಮವಾರ ರಾತ್ರಿ ಹುಣಸಗಿ ತಾಂಡಾದಲ್ಲಿ ನಡೆದಿದೆ.

ಹುಣಸಗಿ ತಾಂಡಾದ ಶಾಂತಾನಾಯಕ ರಾಠೋಡ (45) ಕೊಲೆಯಾದ ವ್ಯಕ್ತಿ.

ಸೋಮವಾರ ರಾತ್ರಿ ಈ ಬಂಗಾರದ ಒಡವೆ (ಬೋರಮಳಾ)ವನ್ನು ಒತ್ತೆ ಇಟ್ಟುಕೊಂಡ ವಿಷಯದಲ್ಲಿ ಕೊಲೆಯಾದ ಶಾಂತಾನಾಯಕ, ಪತ್ನಿ ಮಂಜುಳಾ, ಮಗ ಗುಂಡು ಹಾಗೂ ಆರೋಪಿಗಳಾದ ತಿಪ್ಪನಾಯಕ ರಾಠೋಡನೊಂದಿಗೆ ಬಾಯಿ ಮಾತಿನ ಚಕಮಕಿಯು ಹೊಡೆದಾಟಕ್ಕೆ ತಿರುಗಿದೆ.

ADVERTISEMENT

ಮೃತನ ಪತ್ನಿ ಮಂಜುಳಾ ಶಾಂತಾನಾಯಕ ರಾಠೋಡ್ ನೀಡಿರುವ ದೂರಿನ ಆಧಾರದಲ್ಲಿ ತಿಪ್ಪಾನಾಯಕ ರಾಠೋಡ್, ಮಹಾಂತುನಾಯಕ ರಾಠೋಡ್ ಹಾಗೂ ಮಂಜುಬಾಯಿ ರಾಠೋಡ್ ಸೇರಿ ಮೂವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಇವರಲ್ಲಿ ಆರೋಪಿ ತಿಪ್ಪನಾಯಕನನ್ನು ಬಂಧಿಸಲಾಗಿದೆ ಎಂದು ಹುಣಸಗಿ ಪಿಎಸ್ಐ ಬಾಪುಗೌಡ ಪಾಟೀಲ
ಅವರು ತಿಳಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ವೇದಮೂರ್ತಿ, ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ ಹಾಗೂ ಸಿಪಿಐ ದೌಲತ್ ಎನ್.ಕೆ, ಪಿಎಸ್ಐ ಬಾಪುಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.