ಯಾದಗಿರಿ: ಯುಗಾದಿ ಅಮಾವಾಸ್ಯೆ ಅಂಗವಾಗಿ ತಾಲ್ಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರನ ದರ್ಶನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.
ಹೊನ್ನಕೆರೆಯಲ್ಲಿ ಪುಣ್ಯಸ್ನಾನ ಮಾಡಿದರು. ಮೆಟ್ಟಿಲುಗಳನ್ನು ಹತ್ತಿ ಶ್ರದ್ಧಾ ಭಕ್ತಿಯಿಂದ ಸರದಿಯಲ್ಲಿ ನಿಂತು ಮಲ್ಲಯ್ಯನಿಗೆ ಜೈಕಾರ ಹಾಕಿ ಗದ್ದಲದ ನಡುವೆ ದರ್ಶನ ಪಡೆದರು.
ನೆರೆಯ ಆಂಧ್ರಪ್ರದೇಶದ ಶ್ರೀಶೈಲಂಗೆ ತೆರಳಿದ್ದ ಕಲ್ಯಾಣ ಕರ್ನಾಟಕ ಹಾಗೂ ಮಹಾರಾಷ್ಟ್ರದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.
ಗ್ರಾಮೀಣ ಭಾಗದಿಂದ ಆಗಮಿಸಿದ ಭಕ್ತರು ಹೊನ್ನಕೆರೆಯ ಪಕ್ಕದಲ್ಲಿ ಮೀಸಲು ಅಡುಗೆ ಮಾಡಿ, ಮಲ್ಲಯ್ಯನಿಗೆ ನೈವೇದ್ಯ ಅರ್ಪಿಸಿ ಗುಂಪು-ಗುಂಪಾಗಿ ಕುಟುಂಬಸ್ಥರೊಂದಿಗೆ ಹಾಗೂ ಬಂಧುಗಳೊಂದಿಗೆ ಕುಳಿತು ಊಟ ಮಾಡಿ, ದಾಸೋಹ ಮಾಡುತ್ತಿರುವುದು ಸಾಮಾನ್ಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.