ADVERTISEMENT

ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆ ಮಾ.23ಕ್ಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 10:29 IST
Last Updated 23 ಫೆಬ್ರುವರಿ 2020, 10:29 IST
ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆ, ಆನ್‌ಲೈನ್ ನೋಂದಣಿ ಕುರಿತ ಸಭೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಯಿತು
ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆ, ಆನ್‌ಲೈನ್ ನೋಂದಣಿ ಕುರಿತ ಸಭೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಯಿತು   

ಯಾದಗಿರಿ: ನಿರುದ್ಯೋಗ ಮತ್ತು ರಾಷ್ಟ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಯುವ ಕಾಂಗ್ರೆಸ್ ವತಿಯಿಂದ ದೆಹಲಿಯಲ್ಲಿ ಮಾ.23 ರಂದು ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಯುವಕರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಭಾಗವಹಿಸಬೇಕು ಎಂದು ರಾಜ್ಯ ಯುವ ಘಟಕದ ವಕ್ತಾರ ಚೇತನ ಗೋನಾಯಕ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಇದೇ ತಿಂಗಳ ಫೆ.12ರಂದು ಕಾರ್ಯಕ್ರಮದ ನೋಂದಣಿ ಉದ್ಘಾಟನೆ ಆಗಿದ್ದು, ಹೆಸರು ನೋಂದಾಯಿಸಲು ಫೆ.29 ಕೊನೆಯ ದಿನ ಎಂದರು.

‘ಯಂಗ್ ಇಂಡಿಯಾ ಕೆ ಬೋಲ್’ (ಯುವ ಭಾರತೀಯರ ಕೂಗು) ಎಂಬ ಹೆಸರಿನ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು.

ADVERTISEMENT

ಜಿಲ್ಲಾ ಯುವ ಅಧ್ಯಕ್ಷ ಅಬ್ದುಲ್ ರಜಾಕ್ ಮಾತನಾಡಿ, ಈ ಕಾರ್ಯಕ್ರಮವನ್ನು ಕಾರ್ಯಕರ್ತರು ತಮ್ಮ ಮನೆಯಿಂದಲೇ ಆರಂಭಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಗೌತಮ ರಾವ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮಾನಸಗಲ್, ಜಿಲ್ಲಾ ಉಪಾಧ್ಯಕ್ಷ ಅವಿನಾಶ ಜಗನ್ನಾಥ, ಪ್ರಧಾನ ಕಾರ್ಯದರ್ಶಿ ಸೋಮಶೇಖರ ಮಸ್ಕನಳ್ಳಿ, ಕಾರ್ಯದರ್ಶಿ ದಾವೂದ ಪಠಾಣ, ಶಾಂತಕುಮಾರ, ಕಲಬುರ್ಗಿಕಾರ್ಮಿಕ ಘಟಕದ ಅಧ್ಯಕ್ಷ ಸಾಬರೆಡ್ಡಿ, ಶಹಾಪುರ ತಾಲ್ಲೂಕು ಅಧ್ಯಕ್ಷ ಮೌನೇಶ ನಾಟೇಕರ, ಸುರಪುರ ತಾಲ್ಲೂಕುಅಧ್ಯಕ್ಷ ಸುಲೇಮಾನ, ಅಗಸ್ಟಿನ್ ಪ್ರಮೋದಕುಮಾರ, ಮಹಮ್ಮದ್ ಚೌಧರಿ, ಮಲ್ಲು ಎಸ್.ಆರ್.ಎಸ್., ಫಯಾಜ್ ಕಕ್ಕೇರಾ, ಭೀಮರಾಯ ನಾಯ್ಕಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.