
ಕೆಂಭಾವಿ: ಕೆಂಭಾವಿ ಮಾರ್ಗವಾಗಿ ಬಸವಕಲ್ಯಾಣದಿಂದ ಬಾಗಲಕೋಟೆ ನಗರಕ್ಕೆ ನೂತನವಾಗಿ ಬಸ್ ಆರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಎಚ್.ಪುಲೆಕರ್ ತಿಳಿಸಿದ್ದಾರೆ.
ಬಸವಕಲ್ಯಾಣದಿಂದ ಬೆಳಿಗ್ಗೆ 10 ಗಂಟಗೆ ಹೊರಡುವ ಈ ಬಸ್ ಕಲಬುರಗಿ, ಶಹಾಪುರ, ಕೆಂಭಾವಿ, ಪೀರಾಪುರ, ತಾಳಿಕೋಟೆ, ಮುದ್ದೇಬಿಹಾಳ, ಆಲಮಟ್ಟಿ ಮಾರ್ಗವಾಗಿ ಬಾಗಲಕೋಟೆ ತಲುಪಲಿದೆ. ಇದೇ ಮಾರ್ಗವಾಗಿ ಬೆಳಿಗ್ಗೆ 6 ಗಂಟೆಗೆ ಬಾಗಲಕೋಟೆ ನಗರದಿಂದ ಹೊರಡುವ ಬಸ್ ಬಸವಕಲ್ಯಾಣಕ್ಕೆ 4 ಗಂಟೆಗೆ ತಲುಪಲಿದೆ ಎಂದು ಸೋಮವಾರ ತಿಳಿಸಿದ್ದಾರೆ.
ಈ ಭಾಗದ ಪ್ರಯಾಣಿಕರ ಬಹು ದಿನಗಳ ಬೇಡಿಕೆಯಾಗಿದ್ದ ಈ ಮಾರ್ಗದ ಬಸ್ ಓಡಿಸಲು ಸಹಕರಿಸಿದ ಇಲಾಖೆಯ ಎಲ್ಲ ಮೇಲಧಿಕಾರಿಗಳಿಗೆ ನಾಗರಿಕ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಸಂಜೀವರಾವ ಕುಲಕರ್ಣಿ, ಉಪಾಧ್ಯಕ್ಷ ನೂರುಲ್ಲಾಖಾನ ಹಾಗೂ ಇತರೆ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.