ADVERTISEMENT

‘ಜೇಟ್ಲಿ ರಾಜಕಾರಣದ ಅಜಾತ ಶತೃ’

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 20:00 IST
Last Updated 26 ಆಗಸ್ಟ್ 2019, 20:00 IST
ಸುರಪುರದ ಬಿಜೆಪಿ ಕಚೇರಿಯಲ್ಲಿ ಕೇಂದ್ರದ ಮಾಜಿ ಸಚಿವ ದಿ.ಅರುಣ ಜೇಟ್ಲಿ ಅವರಿಗೆ ಪಕ್ಷದ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು
ಸುರಪುರದ ಬಿಜೆಪಿ ಕಚೇರಿಯಲ್ಲಿ ಕೇಂದ್ರದ ಮಾಜಿ ಸಚಿವ ದಿ.ಅರುಣ ಜೇಟ್ಲಿ ಅವರಿಗೆ ಪಕ್ಷದ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು   

ಸುರಪುರ: ‘ಕೇಂದ್ರದ ಮಾಜಿ ಸಚಿವ ಅರುಣ ಜೇಟ್ಲಿ ನಿಧನ ಪಕ್ಷಕ್ಕೆ ತುಂಬಲಾಗದ ನಷ್ಟವಾಗಿದೆ. ರಾಜಕಾರಣದಲ್ಲಿ ಅಜಾತ ಶತೃವಿನಂತಿದ್ದ ಅವರು ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಬಿಜೆಪಿ ಯುವ ಮುಖಂಡ ಶ್ರೀನಿವಾಸ ನಾಯಕ ಹೇಳೀದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಅರುಣ ಜೇಟ್ಲಿಯವರಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ‘ರಾಷ್ಟ್ರ ರಾಜಕಾರಣದಲ್ಲಿ ಅರುಣ ಜೇಟ್ಲಿಯವರು ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ರಾಜ್ಯದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. ರಾಜ್ಯದಲಿಯೂ ಪಕ್ಷ ಸಂಘಟನೆಗೊಳಿಸಲು ಸಾಕಷ್ಟು ದುಡಿದಿದ್ದಾರೆ’ ಎಂದರು.

ಶಾಸಕರ ಆಪ್ತ ಸಹಾಯಕ ವೀರೂಪಾಕ್ಷಿ ಕೋನಾಳ, ಬಲಭೀಮ ನಾಯಕ, ಶರಣು ನಾಯಕ ಬೈರಿಮಡ್ಡಿ, ನರಸಿಂಹ ಪಂಚಮಗಿರಿ, ಶಂಕರ ನಾಯಕ, ಭಿಮಣ್ಣ ಬೇವಿನಾಳ, ಪಾರಪ್ಪ ಗುತ್ತೇದಾರ, ಕೊತಲಪ್ಪ ಹಾವಿನ್, ಮಾನಪ್ಪ ಚಳ್ಳಿಗಿಡ, ಸಣ್ಣ ದೇಸಾಯಿ, ತಿಪ್ಪಣ್ಣ ದೇವರಗೋನಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.