ನಾರಾಯಣಪುರ: ಬಸವಸಾಗರ ಜಲಾಶಯದಿಂದ 1 ಟಿಎಂಸಿ ಅಡಿಯಷ್ಟು ನೀರನ್ನು ಎಡದಂಡೆ ಮುಖ್ಯ ಕಾಲುವೆಗೆ ಹರಿಸಲಾಯಿತು.
ಕಲಬುರಗಿ ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ಈಗಾಗಲೇ 0.48 ಟಿಎಂಸಿ ಅಡಿಗಳಷ್ಟು ನೀರನ್ನು ಎಡದಂಡೆ ಮುಖ್ಯ ಕಾಲುವೆಗೆ ಹರಿಬಿಡಲಾಗಿದ್ದು, ಬಾಕಿ ಉಳಿದ 0.42 ಟಿಎಂಸಿ ಅಡಿಗಳಷ್ಟು ನೀರನ್ನು ಮುಂದಿನ ಏ. 11ವರೆಗೆ ಹರಿಬಿಡಲಾಗುವದು ಎಂದು ಕೆಬಿಜೆಎನ್ಎಲ್ ಆಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ರೆಡ್ಡಿ ಮಾಹಿತಿ ನೀಡಿದ್ದಾರೆ.
ಕಾಲುವೆಗೆ ಹರಿಬಿಡಲಾದ ನೀರು ಇಂಡಿ ಶಾಖಾ ಕಾಲುವೆಯಿಂದ ಸೊನ್ನ ಬ್ಯಾರೇಜ್ ಮೂಲಕ ಅಫಜಲಪುರ ತಾಲ್ಲೂಕಿಗೆ ಕುಡಿಯುವ ನೀರು ಪೂರೈಕೆ ಬಳಸಿಕೊಳ್ಳಲಾಗುತ್ತದೆ. ನಿಗದಿಪಡಿಸಿದ 1 ಟಿಎಂಸಿ ಅಡಿ ನೀರು ಪೂರ್ಣಗೊಂಡ ನಂತರ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುವುದು ಎಂದು ಗೇಟ್ಸ್ ಉಪವಿಭಾಗದ ಪ್ರಭಾರ ಎಇಇ ವಿಜಯಕುಮಾರ ಅರಳಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.