ಹುಣಸಗಿ (ಯಾದಗಿರಿ ಜಿಲ್ಲೆ): ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪಿಯು ಪರೀಕ್ಷಾ ಕೇಂದ್ರದಲ್ಲಿ ಒಬ್ಬ ವಿದ್ಯಾರ್ಥಿ ಹಾಜರಾಗುವ ಮೂಲಕ ಪರೀಕ್ಷೆ ಎದುರಿಸಿದ್ದಾನೆ.
ಬುಧವಾರ ನಡೆದ ಪಿಯು ಉರ್ದು ವಿಷಯದ ಪರೀಕ್ಷೆಗೆ ಇಲ್ಲಿಗೆ ಸಮೀಪದ ಕಕ್ಕೇರಾ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಾಹ್ಯ ವಿದ್ಯಾರ್ಥಿ ಇಬ್ರಾಹಿಂ ಶಬೀರಸಾಬ ಪರೀಕ್ಷೆಗೆ ಹಾಜರಾಗಿದ್ದರು.
ಪರೀಕ್ಷಾ ಕಾರ್ಯದಲ್ಲಿ ಮುಖ್ಯ ಅಧೀಕ್ಷಕರು, ಇಬ್ಬರು ಜಾಗೃತ ದಳದ ಸಿಬ್ಬಂದಿ, ಉತ್ತರಪತ್ರಿಕೆ ಪಾಲಕರು, ಕಚೇರಿ ಅಧೀಕ್ಷಕರು ಎಸ್‌ಡಿಎ, ಪೊಲೀಸ್ ಸಿಬ್ಬಂದಿ ಹೀಗೆ 10ಕ್ಕೂ ಹೆಚ್ಚು ಜನರು ತೊಡಗಿಕೊಂಡಿದ್ದರು.
ಇದನ್ನೂ ಓದಿ.. ಅನಗತ್ಯ ನಿರ್ಬಂಧ ಹೇರದಂತೆ ಪ್ರಧಾನಿ ಸೂಚನೆ: ಸಿಎಂ ಬೊಮ್ಮಾಯಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.