ADVERTISEMENT

ಪ್ರೀತಿಗೆ ಪೋಷಕರ ಅಡ್ಡಿ: ಪ್ರೇಮಿಗಳು ಆತ್ಮಹತ್ಯೆ

ಸೆಲ್ಫಿ ವಿಡಿಯೊ ಮಾಡಿ ಪೋಷಕರ ಕ್ಷಮೆಯಾಚನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 16:57 IST
Last Updated 10 ಸೆಪ್ಟೆಂಬರ್ 2020, 16:57 IST
ಹನುಮಂತ ಮತ್ತು ಮಹಾದೇವಿ
ಹನುಮಂತ ಮತ್ತು ಮಹಾದೇವಿ   

ಯಾದಗಿರಿ: ಪ್ರೀತಿಗೆ ಪೋಷಕರು ಅಡ್ಡಿ ವ್ಯಕ್ತಪಡಿಸಿದ್ದರಿಂದ ತಾಲ್ಲೂಕಿನ ಗೊಂದಡಗಿ ಗ್ರಾಮದ ಪ್ರೇಮಿಗಳಿಬ್ಬರು ಸೆಲ್ಫಿ ವಿಡಿಯೊದ ಮೂಲಕ ಪೋಷಕರ ಕ್ಷಮೆಯಾಚಿಸಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೊಂದಡಗಿ ಗ್ರಾಮದ ಹನುಮಂತ (25) ಮತ್ತು ಮಹಾದೇವಿ (17) ಆತ್ಮಹತ್ಯೆ ಮಾಡಿಕೊಂಡವರು.ಆಟೊಚಾಲಕನಾಗಿದ್ದ ಹನುಮಂತ ಮತ್ತು ಮಹಾದೇವಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅನ್ಯ ಜಾತಿಯವರಾಗಿದ್ದ ಕಾರಣ ಪೋಷಕರು ಅಡ್ಡಿಪಡಿಸಿದ್ದರು ಎನ್ನಲಾಗಿದೆ.

‘ವಾರದ ಹಿಂದೆ ಪ್ರೀತಿಯ ವಿಷಯ ಮಹಾದೇವಿಯ ಮನೆಯವರಿಗೆ ತಿಳಿದಿತ್ತು. ಹನುಮಂತನನ್ನು ಮರೆತುಬಿಡುವಂತೆ ಮಹಾದೇವಿಯನ್ನು ಒತ್ತಾಯಿಸಿದ್ದರು. ನಂತರ ಸೋದರ ಮಾವನ ಜೊತೆಗೆ ವಿವಾಹ ಮಾಡಲು ತೀರ್ಮಾನಿಸಲಾಗಿತ್ತು. ಹೀಗಾಗಿ ಈ ಪ್ರೇಮಿಗಳು ಸೆಪ್ಟೆಂಬರ್ 8ರಂದು ಮಂಗಳವಾರ ಮನೆ ಬಿಟ್ಟು ತೆರಳಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಇಬ್ಬರ ಮೃತದೇಹ ಗ್ರಾಮದ ಹೊರವಲಯದಲ್ಲಿರುವ ಬಾವಿಯಲ್ಲಿ ಗುರುವಾರ ಪತ್ತೆಯಾಗಿವೆ. ಆತ್ಮಹತ್ಯೆ ಮಾಡಿಕೊಳ್ಳುವಮುನ್ನ ಇವರು ಮಾಡಿದ ಸೆಲ್ಫಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.