ADVERTISEMENT

ಸೈದಾಪುರ| ಸುರಕ್ಷತೆ, ಸಕರಾತ್ಮಕ ಭಾವನೆ ಮೂಡಿಸುವುದೇ ಗುರಿ: ಶಿವಪ್ಪ ಮರಡಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 7:04 IST
Last Updated 9 ನವೆಂಬರ್ 2025, 7:04 IST
ಸೈದಾಪುರ ಪಟ್ಟಣದ ಪೊಲೀಸ್ ಠಾಣೆಗೆ ತೆರೆದ ಮನೆ ಕಾರ್ಯಕ್ರಮದಡಿಯಲ್ಲಿ ಶ್ರೀ ಭಗವಾನ್ ಮಾಹವೀರ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು ಭೇಟಿ ನೀಡಿದರು
ಸೈದಾಪುರ ಪಟ್ಟಣದ ಪೊಲೀಸ್ ಠಾಣೆಗೆ ತೆರೆದ ಮನೆ ಕಾರ್ಯಕ್ರಮದಡಿಯಲ್ಲಿ ಶ್ರೀ ಭಗವಾನ್ ಮಾಹವೀರ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು ಭೇಟಿ ನೀಡಿದರು   

ಸೈದಾಪುರ: ‘ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ಸಂಬಂಧವನ್ನು ಬಲಪಡಿಸುವುದು ಹಾಗೂ ಉತ್ತಮ ನಾಗರಿಕರನ್ನು ರೂಪಿಸುವುದು ತೆರೆದ ಮನೆಯ ಗುರಿಯಾಗಿದೆ’ ಎಂದು ಸೈದಾಪುರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಧಿಕಾರಿ ಶಿವಪ್ಪ ಯಮನಪ್ಪ ಮರಡಿ ತಿಳಿಸಿದರು.

ಪಟ್ಟಣದ ಪೊಲೀಸ ಠಾಣೆಗೆ ತೆರೆದ ಮನೆ ಕಾರ್ಯಕ್ರಮದಡಿಯಲ್ಲಿ ಶ್ರೀ ಭಗವಾನ್ ಮಾಹವೀರ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು ಭೇಟಿ ನೀಡಿದಾಗ ಮಾಹಿತಿ ನೀಡಿ ಮಾತನಾಡಿದರು.

‘ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಜೊತೆಗೆ ನಮ್ಮ ಆಸ್ತಿಪಾಸ್ತಿಯನ್ನು ರಕ್ಷಣೆ ಮಾಡುವ ಜವಬ್ದಾರಿಯನ್ನು ಹೊತ್ತುಕೊಂಡು ಹಗಲಿರುಳು ಕಾಯುವ ಪೊಲೀಸರ ಬಗ್ಗೆ ಜನಸಾಮಾನ್ಯರಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ. ಹೀಗಾಗಿ ಸಾರ್ವಜನಿರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿರುವ ಭಯವನ್ನು ಹೋಗಲಾಡಿಸಿ, ಸಕರಾತ್ಮಕ ಭಾವನೆ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದರು.

ADVERTISEMENT

‘ಜೊತೆಗೆ ಪೊಲೀಸರ ದೈನಂದಿನ ಕರ್ತವ್ಯದ ಕಾರ್ಯವೈಖರಿಗಳು, ಮಕ್ಕಳ ಮೇಲಿನ ದೈಹಿಕ , ಮಾನಸಿಕ ದೌರ್ಜನ್ಯಗಳನ್ನು ತಡೆಯುವ ರೀತಿಯನ್ನು ಪೊಲೀಸರು ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವರು. ಇದರಿಂದ ವಿದ್ಯಾರ್ಥಿಗಳು ಜಾಗೃತರಾಗಿ ಸಮಸ್ಯೆಯನ್ನು ಎದುರಿಸುವ ದಿಟ್ಟ ಧೈರ್ಯವನ್ನು ಹೊಂದುತ್ತಾರೆ. ಪೊಲೀಸರೆಂದರೆ ಜನಸ್ನೇಹಿಗಳು ಎಂಬುದನ್ನು ನೀವು ಅರಿತುಕೊಳ್ಳಬೇಕು ಹಾಗೂ ಇತರರಿಗೂ ನೀವು ತಿಳಿಸಬೇಕು’ ಎಂದು ತಿಳಿಸಿದರು.

ಪಿಎಸ್‍ಐ ಭೀಮರಾಯ ಕೂಡ್ಲೂರು, ಮುಖ್ಯಪೇದೆ ರಾಜಕುಮಾರ, ಶೇಖರ್, ಪೇದೆ ಸಕ್ರೆಪ್ಪ, ಗುಂಡಪ್ಪ, ಮಹಿಳಾ ಪೇದೆ ಅನ್ನ ಪೂರ್ಣ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.