ADVERTISEMENT

ಬಿಸಿಯೂಟ ಸಿಬ್ಬಂದಿ ಧರಣಿ

60 ವರ್ಷ ಮೇಲ್ಪಟ್ಟ ಸಿಬ್ಬಂದಿ ಕೈಬಿಡದಂತೆ ಮನವಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 3:55 IST
Last Updated 14 ಜೂನ್ 2022, 3:55 IST
ಶಹಾಪುರ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಸೋಮವಾರ ಬಿಸಿಯೂಟದ ನೌಕರರನ್ನು ವಾಪಸ್ ಕಳುಹಿಸಿರುವುದನ್ನು ಖಂಡಿಸಿ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಧರಣಿ ನಡೆಸಲಾಯಿತು
ಶಹಾಪುರ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಸೋಮವಾರ ಬಿಸಿಯೂಟದ ನೌಕರರನ್ನು ವಾಪಸ್ ಕಳುಹಿಸಿರುವುದನ್ನು ಖಂಡಿಸಿ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಧರಣಿ ನಡೆಸಲಾಯಿತು   

ಶಹಾಪುರ: 60 ವರ್ಷ ತುಂಬಿದ ಬಿಸಿಯೂಟ ಸಿಬ್ಬಂದಿಯನ್ನು ಮನೆಗೆ ಕಳುಹಿಸುತ್ತಿರುವುದನ್ನು ವಿರೋಧಿಸಿ ಸೋಮವಾರ ಸಿಐಟಿಯು ಸಂಘಟನೆಯ ಹಾಗೂ ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿದರು.

ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಮಹಿಳೆಯರ ತಾಯ್ತನದ ಪರಿಶ್ರಮವಿದೆ. ಆದರೆ 60 ವರ್ಷ ನೆಪವೊಡ್ಡಿ 19 ವರ್ಷಗಳಿಂದ ಅತ್ಯಂತ ಕಡಿಮೆ ವೇತನದಲ್ಲಿ ದುಡಿದ ಬಡ ಬಿಸಿಯೂಟ ನೌಕರರನ್ನು ಬರಿಗೈಯಲ್ಲಿ ಮನೆಗೆ ಕಳುಹಿಸುವ ಸರ್ಕಾರದ ನಡೆ ಸರಿಯಲ್ಲ ಎಂದು ಸಿಐಟಿಯು ಜಿಲ್ಲಾ ಸಂಚಾಲಕ ಜೈಲಾಲ್ ತೋಟದಮನಿ ತಿಳಿಸಿದರು.

ತಾಲ್ಲೂಕಿನಲ್ಲಿ 869 ಮಹಿಳೆಯರು ಅಕ್ಷರ ದಾಸೋಹ ಯೋಜನೆ ಯಡಿಯಲ್ಲಿ ದುಡಿಯುತ್ತಿದ್ದಾರೆ. 85 ಜನರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದು ಬೇಸರ ಮೂಡಿಸಿದೆ. ವೇತನ ಹೆಚ್ಚಳ, ನಿವೃತ್ತಿ ವೇತನ, ಬೇಡಿಕೆಗಳ ಸರ್ಕಾರ ಭರವಸೆಗಳನ್ನು ಈಡೇರಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಿಐಟಿಯು ತಾಲ್ಲೂಕು ಸಂಚಾಲಕ ಮಲ್ಲಯ್ಯ ಪೊಲಂಪಲ್ಲಿ, ಹಣಮಂತಿ ಮೌರ್ಯ, ಬಸಲಿಂಗಮ್ಮ ನಾಟೇಕರ್, ಈರಮ್ಮ ಹಯ್ಯಾಳಕರ್, ಮಂಜುಳಾ ಹೊಸ್ಮನಿ, ಲಾಲಬಿ, ಶೇಖಮ್ಮ ರಾಜಪುರ, ಚಂದಮ್ಮ ಶಿರವಾಳ, ಶಾಂತಮ್ಮ, ಶಾಂತಾಬಾಯಿ ಬಿರಣಕಲ್ ನೀಲಮ್ಮ ಇಟಿಗಿ, ರೇಣುಕಾ, ಸುಮಿತ್ರಾ, ಭೀಮರಾಯ ಬಾಣತಿಹಾಳ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.