ADVERTISEMENT

ಯರಗೋಳ: ಭಗವಾನ್ ರೆಡ್ಡಿ ಬಂಧನ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 6:11 IST
Last Updated 5 ಜನವರಿ 2026, 6:11 IST
ಯರಗೋಳ ವ್ಯಾಪ್ತಿಯ ಹಡಗಿ ಮುದ್ರ ಗ್ರಾಮದಲ್ಲಿಎಐಕೆಕೆಎಂಎಸ್‌ನ ರಾಜ್ಯ ಕಾರ್ಯದರ್ಶಿ ಬಿ.ಭಗವಾನ್ ರೆಡ್ಡಿ ಹಾಗೂ ಇನ್ನಿತರ ನಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು
ಯರಗೋಳ ವ್ಯಾಪ್ತಿಯ ಹಡಗಿ ಮುದ್ರ ಗ್ರಾಮದಲ್ಲಿಎಐಕೆಕೆಎಂಎಸ್‌ನ ರಾಜ್ಯ ಕಾರ್ಯದರ್ಶಿ ಬಿ.ಭಗವಾನ್ ರೆಡ್ಡಿ ಹಾಗೂ ಇನ್ನಿತರ ನಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು   

ಹೆಡಗಿ ಮದ್ರ (ಯರಗೋಳ): ಗ್ರಾಮದಲ್ಲಿ ಎಐಕೆಕೆಎಂಎಸ್‌ನ ರಾಜ್ಯ ಕಾರ್ಯದರ್ಶಿ ಬಿ.ಭಗವಾನ್ ರೆಡ್ಡಿ ಹಾಗೂ ಇನ್ನಿತರ ನಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಎಐಕೆಕೆಎಂಎಸ್‌ ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ಜಮಾಲ್ ಸಾಬ್ ಮಾತನಾಡಿ, ‘ಸರ್ಕಾರಿ ಆಸ್ಪತ್ರೆ ಖಾಸಗೀಕರಣಗೊಳಿಸಬಾರದೆಂದು 100 ದಿನಗಳಿಂದ ಹೋರಾಟ ನಡೆಸುತ್ತಿದ್ದ ಬಿಜಾಪುರ ಸರ್ಕಾರಿ ಆಸ್ಪತ್ರೆಗಾಗಿ ಹೋರಾಟ ಸಮಿತಿಯ ಹಾಗೂ ಕೋರ್ ಕಮಿಟಿಯ ಪ್ರಮುಖ ಸದಸ್ಯ, ಎಐಕೆಕೆಎಂಎಸ್‌ ರಾಜ್ಯ ಕಾರ್ಯದರ್ಶಿಯಾದ ಬಿ.ಭಗವಾನ್ ರೆಡ್ಡಿ ಹಾಗೂ ಸಂಗಡಿಗರನ್ನು ಬಂಧಿಸಿ ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದನ್ನು ಉಗ್ರವಾಗಿ ಖಂಡಿಸುತ್ತೇವೆ‘ ಎಂದರು.

‘ಯಾರು ಎಷ್ಟೇ ಪ್ರಯತ್ನಪಟ್ಟರು ಹೋರಾಟ ನಿಲ್ಲಿಸುವುದಿಲ್ಲ. ಬಿಜಾಪುರದಲ್ಲಿ ಮೆಡಿಕಲ್ ಕಾಲೇಜು ಆಗುವವರೆಗೂ ಹೋರಾಟ ಮುಂದುವರಿಯುತ್ತದೆ. ಬಂಧಿತರನ್ನು ಕೂಡಲೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು ಮತ್ತು ಅವರ ಮೇಲಿರುವ ಎಲ್ಲಾ ಸುಳ್ಳು ಮೊಕದ್ದಮೆಗಳನ್ನು ಹಿಂತೆಗದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಅಂಬರೀಶ್ ಧಣಿ ಕೆಂಭಾವಿ, ಸುರೇಶ ತೆಳಿ ಗೇರಿ, ಮರಿಯಪ್ಪ ಶಂಕರ ಬಂಡಿ, ತಿಮ್ಮಣ್ಣ, ಸಾಬಣ್ಣ ಕಟಕಟಿ, ಸಾಹೇಬ್ ಗೌಡ ಅಲ್ಲಿಪುರ, ಸಾಬಣ್ಣ ಪತ್ಪುರ್, ಮಲ್ಲಮ್ಮ ಅಂಬಿಗೇರ್, ಮೆಹಬೂಬ್ ಬಿ.ಹುಲಕಲ್, ದ್ಯಾವಮ್ಮ ಶಂಕರ ಬಂಡಿ, ಮಲ್ಲಮ್ಮ ಪೂಜಾರಿ, ದ್ಯಾವಮ್ಮ ಮಡಿವಾಳ ಇನ್ನಿತರರು ಪ್ರತಿಭಟನೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.