ADVERTISEMENT

ನಾರಾಯಣಗೌಡ ಬಿಡುಗಡೆಗೆ ಒತ್ತಾಯ: ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 15:36 IST
Last Updated 5 ಜನವರಿ 2024, 15:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗುರುಮಠಕಲ್: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರನ್ನು ಬಂಧಿಸಿದ್ದನ್ನು ವಿರೋಧಿಸಿ ಕರವೇ ತಾಲ್ಲೂಕು ಘಟಕದ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ನೀಲಪ್ರಭ ಬಬಲಾದ ಅವರಿಗೆ ಮನವಿ ಪತ್ರ ನೀಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸಪ್ಪ ಎಲ್ಲೇರಿ ಮಾತನಾಡಿ, ‘ನಾಮಫಲಕದಲ್ಲಿ ಕನ್ನಡ ಬಳಕೆ ಮಾಡುವಂತೆ ಮಾಲ್‌ನವರಿಗೆ ತಾಕೀತು ಮಾಡಿದರೆ ನಾರಾಯಣಗೌಡರ ವಿರುದ್ಧ ದೂರು ದಾಖಲಿಸಿ ಬಂಧಸಿದ್ದು ಖಂಡನೀಯ. ಸರ್ಕಾರ ಕೂಡಲೇ ಪ್ರಕರಣ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸರ್ಕಾರ ಕನ್ನಡ ಪರ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಬಾರದು. ಜತೆಗೆ ನ್ಯಾಯಾಲಯವೂ ಖಾಸಗಿ ಸಂಸ್ಥೆಗಳ ಫಲಕಗಳಲ್ಲೂ ಶೇ 60 ರಷ್ಟು ಕನ್ನಡ ಬಳಕೆ ಮಾಡುವಂತೆ ತೀರ್ಪು ನೀಡಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಕೋರಿದರು.

ಮುಖಂಡ ಗೋಪಾಲಕೃಷ್ಣ ಮೇದಾ ಮಾತನಾಡಿ,‘ಸರ್ಕಾರ ಕನ್ನಡಪರ ಹೋರಾಟಗಾರರ ಮೇಲೆ ದಾಖಲಿಸಿದ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು. ನಾರಾಯಣಗೌಡ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಕನ್ನಡ ಬಳಕೆಗೆ ಕ್ರಮ ವಹಿಸಬೇಕು. ವಿಳಂಬ ಧೊರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಭೀಮಾಶಂಕರ ಪಡಿಗೆ, ಬಸ್ಸು ನಾಯಕ, ಮೌನೇಶ ಕೊಂಕಲ್, ಸುರೇಶ ಬೆಳಗುಂದಿ, ವಿನೋದಕುಮಾರ ತಲಾರಿ, ವೆಂಕಟೇಶ, ಅವಿನಾಶ ಗೌಡ, ಶರಣು, ನಿಖಿಲ್ ಢಗೆ, ಚಿನ್ನಪ್ಪ ಕಾಕಲ್ವಾರ, ಸುನೀಲ, ಭರತ ಮಿಟ್ಟೆ, ಸಾಬಣ್ಣ ಬೂದೂರ, ಸಾಬಪ್ಪ, ಭಗವಂತು, ಪರಮೇಶ, ಸಂಜು ಹಾಗೂ ಕಾಶಿ ಪಾಲಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.