ಯಾದಗಿರಿ: ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಮುದ್ನಾಳ ಪೆಟ್ರೋಲ್ ಬಂಕ್ ಬಳಿ ತೈಲ ಬೆಲೆ ಏರಿಕೆ ಖಂಡಿಸಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅವಿನಾಶ್ ಜಗನ್ನಾಥ್ ಮಾತನಾಡಿ,ಕೋವಿಡ್ ಸಂದರ್ಭದಲ್ಲಿ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಆ ವೇಳೆ ಕೇಂದ್ರ ಸರ್ಕಾರವು ತೈಲ ಬೆಲೆ ಏರಿಕೆ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಗನಕ್ಕೇರಿದ ತೈಲಬೆಲೆ ಕಾರಣದಿಂದ ದಿನ ದಿನಬಳಕೆ ವಸ್ತುಗಳ ದರವೂ ಗಗನಕ್ಕೆ ಮುಟ್ಟಲಿದ್ದು, ಕೂಡಲೇ ಕೇಂದ್ರ ಸರ್ಕಾರವು ತೈಲ ಬೆಲೆಯ ಮೇಲಿನ ಸುಂಕವನ್ನು ಇಳಿಸಬೇಕು. ಆಗ ಮಾತ್ರ ಸಾಮಾನ್ಯ ವರ್ಗದ ಜನರಿಗೆ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯಚೆನ್ನಾರಡ್ಡಿ ತುನ್ನೂರ, ಸೇವಾದಳ ಅಧ್ಯಕ್ಷ ಲಕ್ಷ್ಮಣ್ ರಾಥೋಡ್, ಮುಖಂಡರಾದ ವೆಂಕಟೇಶ್ ನಾಗುಂಡಿ, ವಿಶ್ವನಾಥ್ ಮಾಲಿಪಾಟೀಲ, ಕೃಷ್ಣಾ ದಾಸನಕೇರಿ, ಅಭಿಷೇಕ್ ದಾಸನಕೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.