ADVERTISEMENT

ನಾರಾಯಣಪುರ | ಪ್ರಾಸಿಕ್ಯೂಷನ್‌ಗೆ ಅನುಮತಿ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 16:16 IST
Last Updated 18 ಆಗಸ್ಟ್ 2024, 16:16 IST
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಕ್ರಮವನ್ನು ಖಂಡಿಸಿ ಪ್ರತಿಭಟನಕಾರರು ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಉಪತಹಶೀಲ್ದಾರ್‌ ಕಲ್ಲಪ್ಪ ಜಂಜಿಗಡ್ಡಿ ಅವರಿಗೆ ಸಲ್ಲಿಸಿದರು
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಕ್ರಮವನ್ನು ಖಂಡಿಸಿ ಪ್ರತಿಭಟನಕಾರರು ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಉಪತಹಶೀಲ್ದಾರ್‌ ಕಲ್ಲಪ್ಪ ಜಂಜಿಗಡ್ಡಿ ಅವರಿಗೆ ಸಲ್ಲಿಸಿದರು   

ನಾರಾಯಣಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಕ್ರಮವನ್ನು ಖಂಡಿಸಿ ಇಲ್ಲಿನ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಭಾನುವಾರ ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಭಕ್ತ ಕನಕದಾಸರ ವೃತ್ತದಿಂದ ಮಹರ್ಷಿ ವಾಲ್ಮೀಕಿ ವೃತ್ತದವರೆಗೆ ಜರುಗಿದ ಪ್ರತಿಭಟನ ಮೆರವಣಿಗೆಯಲ್ಲಿ ಕಾರ್ಯಕರ್ತರು ಕೇಂದ್ರ ಸರ್ಕಾರ, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮುಖಂಡರಾದ ರವಿಚಂದ್ರ ಆನಂದ ಸಾಹುಕಾರ, ಬೀರಲಿಂಗ ನಿಂಗಣ್ಣ ಬಾದ್ಯಾಪೂರ ಮಾತನಾಡಿ,‘ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಕ್ರಮವನ್ನು ಕಟುವಾಗಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ಕೊಡೇಕಲ್ ನಾಡ ಕಾರ್ಯಾಲಯದ ಉಪತಹಶೀಲ್ದಾರ್‌ ಕಲ್ಲಪ್ಪ ಜಂಜಿಗಡ್ಡಿ ಅವರ ಮೂಲಕ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.

ಪರಮಣ್ಣ ಹಾಲಬಾವಿ, ಪರಮಣ್ಣ ನಿಲೋಗಲ್ಲ, ತಿಮ್ಮಣ್ಣ, ಯಮನಪ್ಪ ದೊರಿ, ಯಮನಪ್ಪ ಜಂಜಿಗಡ್ಡಿ, ಶಾಂತಪ್ಪ ಮೆಸ್ತಕ, ಅಮರೇಶ ಕೊಳೂರ, ಹಣಮಂತ ಚಿತ್ತಾಪುರ, ಗುಡದಪ್ಪ ಆಕಳವಾಡಿ, ಅಮರಪ್ಪ ಬಡಿಗೇರ, ಸಿದ್ದಪ್ಪ ಕ್ಯಾದಗಿ, ನಾಗರಾಜ ಜೂಗುರ, ಸಿದ್ದಪ್ಪ ಕಮಲಾಪುರ, ಹುಲಗಪ್ಪ ಕಬಡರ, ವಿರೇಶ ಕಂಬಳಿ, ದೇವಪ್ಪ ಕಬಡರ, ಭರಮಣ್ಣ ಕಂಬಳಿ, ಅಮರೇಶ ಅಮರಾವತಗಿ, ಗದ್ಯಪ್ಪ ಕ್ಯಾದಗಿ, ಯಮನಪ್ಪ ವಕೀಲರು, ಪರಮಣ್ಣ ಹಾಳಗೋಡಿ ಸೇರಿದಂತೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ನಾರಾಯಣಪುರ ಘಟಕದ ಪ್ರಮುಖರು, ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿ ಬಳಗದವರು ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.