ಯಾದಗಿರಿ: ದ್ವಿತೀಯ ಪದವಿ ಪೂರ್ವ ಕಾಲೇಜು ಫಲಿತಾಂಶದಲ್ಲಿ ನಗರಕ್ಕಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಟಾಪ್ ಸ್ಥಾನ ಪಡೆದಿದ್ದಾರೆ. ಅದರಲ್ಲೂ ಕಳೆದ 10 ವರ್ಷಗಳಿಂದ ಹಳ್ಳಿಯ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಮುಂದಿದ್ದಾರೆ.
ನಗರ ಪ್ರದೇಶದಲ್ಲಿ 2025 ಮಾರ್ಚ್ ತಿಂಗಳಲ್ಲಿ ನಡೆದ ಪರೀಕ್ಷೆಗೆ 8,697 ವಿದ್ಯಾರ್ಥಿಗಳು ಹಾಜರಾಗಿದ್ದು, 3,746 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 43.7 ರಷ್ಟು ಫಲಿತಾಂಶ ಬಂದಿದೆ. ಗ್ರಾಮಾಂತರ ಪ್ರದೇಶದಲ್ಲಿ 2,166 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 958 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 44.23 ರಷ್ಟು ಫಲಿತಾಂಶ ಬಂದಿದೆ.
ಇನ್ನು ಬಾಲಕರ ಫಲಿತಾಂಶಕ್ಕೆ ಸಂಬಂಧಿಸಿದಂತೆ 5,350 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1,865 ಉತ್ತೀರ್ಣರಾಗಿ ಶೇ 34.86 ಫಲಿತಾಂಶ ಪಡೆದಿದ್ದಾರೆ. 5,513 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, 2,839 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಶೇ 51.50 ರಷ್ಟು ಫಲಿತಾಂಶವನ್ನು ಈ ವರ್ಷದಲ್ಲಿ ಪಡೆದಿದ್ದಾರೆ.
ನಗರ ಪ್ರದೇಶದ ಫಲಿತಾಂಶ:
2016ರಲ್ಲಿ ಶೇ 35.55, 2017ರಲ್ಲಿ ಶೇ 34.74, 2018 ರಲ್ಲಿ ಶೇ 43.59, 2019ರಲ್ಲಿ ಶೇ 52.03, 2020ರಲ್ಲಿ ಶೇ 57.67, 2021ರಲ್ಲಿ ಶೇ 100, 2022ರಲ್ಲಿ ಶೇ 52.53, 2023ರಲ್ಲಿ ಶೇ 60.13, 2024ರಲ್ಲಿ ಶೇ 73.11, 2025ರಲ್ಲಿ ಶೇ 43.07ರಲ್ಲಿ ಫಲಿತಾಂಶ ಪಡೆದಿದ್ದಾರೆ.
ಗ್ರಾಮೀಣ ಭಾಗದ ಫಲಿತಾಂಶ:
2016ರಲ್ಲಿ ಶೇ 38.26, 2017ರಲ್ಲಿ ಶೇ 37.77, 2018 ರಲ್ಲಿ ಶೇ 56.50, 2019ರಲ್ಲಿ ಶೇ 57.25, 2020ರಲ್ಲಿ ಶೇ 61.60, 2021ರಲ್ಲಿ ಶೇ 100, 2022ರಲ್ಲಿ ಶೇ 64.62, 2023ರಲ್ಲಿ ಶೇ 74.39, 2024ರಲ್ಲಿ ಶೇ 78.58, 2025ರಲ್ಲಿ ಶೇ 44.23ರಲ್ಲಿ ಫಲಿತಾಂಶ ಬಂದಿದೆ.
ನಗರ ಪ್ರದೇಶಕ್ಕಿಂತ ಗ್ರಾಮೀಣದಲ್ಲಿ ಉತ್ತಮ ಫಲಿತಾಂಶ ಬಂದಿದೆ. ಕಳೆದ 10 ವರ್ಷಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಾಗಿದೆಸಿ.ಕೆ.ಕುಳಗೇರಿ ಉಪನಿರ್ದೇಶಕ ಸರ್ಕಾರಿ ಪದವಿ ಪೂರ್ವ ಕಾಲೇಜು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.