ADVERTISEMENT

ಪುಣ್ಯಾನಂದಪುರಿ ಸ್ವಾಮೀಜಿ ಪುಣ್ಯಸ್ಮರಣೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 4:42 IST
Last Updated 4 ಏಪ್ರಿಲ್ 2022, 4:42 IST
ಶಹಾಪುರ ನಗರದ ಹಳಿಸಗರ ವಾಲ್ಮೀಕಿ ವೃತ್ತದಲ್ಲಿ ಭಾನುವಾರ ವಾಲ್ಮೀಕಿ ಗುರುಪೀಠದ ಪುಣ್ಯನಂದ ಪುರಿ ಸ್ವಾಮೀಜಿಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮಾಜದ ಮುಖಂಡರು
ಶಹಾಪುರ ನಗರದ ಹಳಿಸಗರ ವಾಲ್ಮೀಕಿ ವೃತ್ತದಲ್ಲಿ ಭಾನುವಾರ ವಾಲ್ಮೀಕಿ ಗುರುಪೀಠದ ಪುಣ್ಯನಂದ ಪುರಿ ಸ್ವಾಮೀಜಿಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮಾಜದ ಮುಖಂಡರು   

ಶಹಾಪುರ: ವಾಲ್ಮೀಕಿ ಸಮಾಜದ ಪ್ರಥಮ ಗುರು ಹಾಗೂ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪುಣ್ಯಾನಂದ ಪುರಿ ಸ್ವಾಮೀಜಿಯ 15ನೇ ಪುಣ್ಯಸ್ಮರಣೆ ಯನ್ನು ನಗರದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಸಮುದಾಯದ ಮುಖಂಡರು ಭಾನುವಾರ ಆಚರಿಸಿದರು.

ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಮಾತನಾಡಿ, ಪುಣ್ಯಾನಂದಪುರಿ ಸ್ವಾಮೀಜಿ ಸಮುದಾಯದ ಜೀವಾಳವಾಗಿದ್ದರು. ಅವರು ಮಾರ್ಗದರ್ಶನ ನಮಗೆ ದಾರಿದೀಪ. ಇಂದಿನ ಪ್ರಸನ್ನಾನಂದ ಸ್ವಾಮೀಜಿ ಪರಿಶಿಷ್ಟ ಪಂಗಡದ ಮೀಸಲಾತಿಗಾಗಿ ಹಲವು ದಿನಗಳಿಂದ ಧರಣಿ ನಡೆಸಿದ್ದಾರೆ. ಸರ್ಕಾರ ಮಾತ್ರ ಮೀಸಲಾತಿಯ ಹೆಚ್ಚಳಕ್ಕೆ ಮೀನವೇಷ ಎಣಿಸುತ್ತಿರುವುದು ಬೇಸರ ಮೂಡಿಸಿದೆ ಎಂದು ಹೇಳಿದರು.

ಸರ್ಕಾರ ಶೇ 7.5ರಷ್ಟು ಮೀಸಲಾತಿ ಕಲ್ಪಿಸಬೇಕು. ಪರಿಶಿಷ್ಟ ಪಂಗಡದ ಬೇಡಿಕೆಗೆ ಸ್ಪಂದಿಸಿ ಇಲ್ಲದೆ ಹೋದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಗ್ರಾಮೀಣ ಮಟ್ಟದ ಎಲ್ಲಾ ವಾಲ್ಮೀಕಿ ಸಮಾಜ ಸಂಘಗಳು ಬೆಂಬಲ ನೀಡಲಿವೆ. ನ್ಯಾಯಪರ ಹೊರಾಟಕ್ಕೆ ಸಿದ್ದರಾಗಬೇಕು ಎಂದು ಸಮಾಜದ ಮುಖಂಡ ಗೌಡಪ್ಪಗೌಡ ಆಲ್ದಾಳ ತಿಳಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಸಂಘದ ತಾಲ್ಲೂಕು ಕಾರ್ಯದರ್ಶಿ ಹಣಮಂತರಾಯ ಟೋಕಾಪುರ, ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ಮಾಹಾಂತೇಶ ದೊರೆ, ಸಿದ್ದಣ್ಣ ಮಾಸ್ತರ ಮಾನಸುಣಗಿ, ರಾವುತಪ್ಪ ಹವಾಲ್ದಾರ, ಶೇಖರ ದೊರೆ ಕಕ್ಕಸಗೇರಾ, ರವಿಕುಮಾರ ಯಕ್ಷಿಂತಿ, ಸಂಗಮೇಶ ಯಕ್ಷಿಂತಿ, ರಾಘವೆಂದ್ರ ಯಕ್ಷಿಂತಿ, ದೇವಪ್ಪ ಯಕ್ಷಿಂತಿ, ಮಲ್ಲು ಅಳ್ಳಳ್ಳಿ, ಶಿವರಾಜ, ತಿರುಪತಿ ಯಕ್ಷಿಂತಿ, ಸುಭಾಶ ರಾಂಪುರೆ, ತಿರುಪತಿ ಮೇಸ್ತ್ರಿ ಇದ್ದರು.

ಸಮಾಜದ ಒಗ್ಗಟ್ಟಿಗೆ ಯತ್ನಿಸಿದ್ದ ಮಹಾನ್ ಚೇತನ’

ಕಕ್ಕೇರಾ: ಮಹರ್ಷಿ ವಾಲ್ಮೀಕಿ ಸಂಘದತಾಲ್ಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಪುಣ್ಯಾನಂದಪುರಿ ಸ್ವಾಮೀಜಿಯ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಿತು.

ಸಂಘದ ಅಧ್ಯಕ್ಷ ಗಂಗಾಧರನಾಯಕ ಮಾತನಾಡಿ, ಪುಣ್ಯನಂದಪುರಿ ಸ್ವಾಮೀಜಿ ವಾಲ್ಮೀಕಿ ಗುರುಪೀಠ ಸ್ಥಾಪಿಸಿ ಇಡೀ ಸಮುದಾಯಕ್ಕೆ ಒಂದು ವೇದಿಕೆ ಕಲ್ಪಿಸಿಕೊಟ್ಟರು. ಈ ಮೂಲಕ ಸಮಾಜವನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದ ಮಹಾನ್ ಚೇತನ ಎಂದರು.

ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಬೇಟೆ ಗಾರ ಮಾತನಾಡಿ,ಪುಣ್ಯಾನಂದಪುರಿ ಸ್ವಾಮೀಜಿ ಸಮಾಜ, ನಾಡು, ನುಡಿಯ ಏಳಿಗೆಗೆ ಶ್ರಮಿಸಿದ್ದರು ಎಂದು ಹೇಳಿದರು.

ಕಾರ್ಯಧ್ಯಕ್ಷ ರಮೇಶ ದೊರೆ ಮಾತನಾಡಿ, ಸ್ವಾಮೀಜಿಯ ಆಚಾರ ಮತ್ತು ವಿಚಾರಗಳು ಸದಾ ಜೀವಂತ. ವಾಲ್ಮೀಕಿ ಸಮಾಜದ ಮೀಸಲಾತಿಗಾಗಿ ಆಗ್ರಹಿಸಿ ಧರಣಿ ನಡೆಸುತ್ತಿದ್ದರೂ ಸರ್ಕಾರದ ಸ್ಪಂದಿಸುತ್ತಿಲ್ಲ. ಇದು ಹೀಗೆ ಮುಂದುವರಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಮುಖಂಡರಾದ ದೇವಿಂದ್ರಪ್ಪ ಬಳಿಚಕ್ರ, ಗುಂಡಪ್ಪ ಸೋಲ್ಲಾಪುರ, ಆದಯ್ಯ ಗುರಿಕಾರ, ಶರಣಗೌಡ ಗೌಡಗೇರಿ, ಪರಶುರಾಮ ಗೋವಿಂದರ್, ಅಂಬರೇಶ ದೊರೆ, ಪರಮಣ್ಣ ವಡಿಕೇರಿ, ವೆಂಕಟೇಶ ದೊರೆ, ಮೌನೇಶ ಗುರಿಕಾರ, ಸೋಮನಗೌಡ ಬೈಲಾಪೂರ, ಬಸಣ್ಣ ಚಿಂಚೋಡಿ, ಅಮರಣ್ಣ ದೊರೆ, ಗ್ವಾಲಪ್ಪ ಮಲಕೋಜಿ, ರಂಗಪ್ಪ ಬುಂಕಲದೊಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.