ADVERTISEMENT

ಗುರುಮಠಕಲ್, ಶಹಾಪುರದಲ್ಲಿ ಇಳೆಗೆ ತಂಪೆರೆದ ತುಂತುರು ಮಳೆ

​ಪ್ರಜಾವಾಣಿ ವಾರ್ತೆ
Published 6 ಮೇ 2021, 5:05 IST
Last Updated 6 ಮೇ 2021, 5:05 IST
ಗುರುಮಠಕಲ್ ತಾಲ್ಲೂಕಿನಲ್ಲಿ ಬುಧವಾರ ಸುರಿದ ಮಳೆಗೆ ಮುಳ್ಳಿನ ಬೇಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ
ಗುರುಮಠಕಲ್ ತಾಲ್ಲೂಕಿನಲ್ಲಿ ಬುಧವಾರ ಸುರಿದ ಮಳೆಗೆ ಮುಳ್ಳಿನ ಬೇಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ   

ಗುರುಮಠಕಲ್: ಪಟ್ಟಣ, ಪುಟಪಾಕ, ಚಪೆಟ್ಲಾ, ಗಾಜರಕೋಟ, ಕೇಶ್ವಾರ, ದಂತಾಪುರ, ಚಂಡರಕಿ, ಕಾಕಲವಾರ, ಎಂಟಿಪಲ್ಲಿ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಗಾಳಿ ಸಹಿತ 30 ನಿಮಿಷಗಳ ಕಾಲಮಳೆ ಸುರಿದಿದ್ದು, ಕಾದ ಕಾವಲಿಯಂತಿದ್ದ ಭೂಮಿಗೆ ಸ್ವಲ್ಪ ತಂಪುಂಟುಮಾಡಿದೆ.

ಸಂಜೆ ಏಕಾಏಕಿ ಮೋಡ ಕವಿದಿದ್ದು ಗಾಳಿ ಬೀಸಲು ಆರಂಭವಾಗಿತ್ತು, ಧೋ ಎಂದು ಮಳೆ ಸುರಿಯಲು ಆರಂಭವಾಗಿ ಗುಡುಗಿನ ಸದ್ದಿಗೆ ಸಿಡಿಲೇ ಬಡಿದಂತಾವಾತಾವರಣ ಕಂಡುಬಂದಿದ್ದು, ಸುಮಾರು 20 ನಿಮಿಷಗಳು ಮಳೆ ಸುರಿದ ನಂತರ ಕೊಂಚ ನೀಮತಿತ್ತು ಮತ್ತೆ ನಂತರ 20 ನಿಮಿಷಗಳ ಕಾಲ ತುಂತುರು ಹನಿಗಳನ್ನು ಸುರಿಸಿದ ಮಳೆರಾಯ ವಾತಾವರಣವನ್ನು ತಂಪಾಗಿಸಿದೆ.

ಪಟ್ಟಣದಿಂದ ನಾರಾಯಣಪೇಟಕ್ಕೆ ಹೋಗುವ ರಸ್ತೆಗೆ ಕಾಡು ಹಂದಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಹಾಕಿಕೊಂಡಿದ್ದ ಮುಳ್ಳಿನ ಬೇಲಿ ಗಾಳಿಯಿಂದಾಗಿ ಕಿತ್ತು, ರಸ್ತೆಗೆ ಅಡ್ಡಲಾಗಿ ಬಿದ್ದ ದೃಶ್ಯಗಳು ಕಂಡುಬಂದವು.

ADVERTISEMENT

ಉತ್ತಮ ಮಳೆ
ಶಹಾಪುರ:
ನಗರದಲ್ಲಿ ಬುಧವಾರ ಸಂಜೆ ಸುಮಾರು 20 ನಿಮಿಷ ಉತ್ತಮ ಮಳೆಯಾಗಿದೆ. ಬಿಸಿಲಿನಿಂದ ಕಂಗೆಟ್ಟ ಜನತೆ ತುಸು ನಿಟ್ಟುಸಿರು ಬಿಡುವಂತೆ ಆಗಿದೆ. ಕಾದ ಕಬ್ಬಿಣದಂತೆ ಆದ ಭೂಮಿಗೆ ತಂಪು ನೀಡಿದೆ.ಅಕಾಲಿಕ ಮಳೆಯಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.