ನಾರಾಯಣಪುರ: ಬಸವಸಾಗರ ಜಲಾಶಯದ 30 ಗೇಟ್ ತೆರೆದು 3.22 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿ ಹರಿಬಿಡಲಾಗುತ್ತಿದೆ.
ಬುಧವಾರ ಆಲಮಟ್ಟಿ ಜಲಾಶಯದಿಂದ 3.35 ಲಕ್ಷ ಕ್ಯುಸೆಕ್ ಪ್ರಮಾಣದಷ್ಟು ನೀರಿನ ಒಳಹರಿವು ಇದೆ. ಜಲಾಶಯಕ್ಕೆ ಬರುವ ಒಳಹರಿವು ಗಮನಿಸಿ ಕೃಷ್ಣಾ ನದಿಗೆ ನೀರು ಹರಿಬಿಡಲಾಗುತ್ತಿದೆ.
ವಿದ್ಯುತ್ ಉತ್ಪಾದನೆ: ಜಲಾಶಯಕ್ಕೆ ಹೊಂದಿಕೊಂಡಿರುವ ಎಂಪಿಸಿಎಲ್ ಜಲವಿದ್ಯುತ್ ಸ್ಥಾವರದಿಂದ 12 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯೊಂದಿಗೆ 6ಸಾವಿರ ಕ್ಯುಸೆಕ್ ನೀರನ್ನು ಬಳಸಿ ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ನದಿ ಪಾತ್ರದ ಬೋರುಕಾ ಜಲವಿದ್ಯುತ್ ಸ್ಥಾವರದಿಂದಲೂ 24 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.