
ಯಾದಗಿರಿ: ಜಿಲ್ಲೆಯ ಅಲೆಮಾರಿ ಸಮುದಾಯ ಜಯಲಕ್ಷ್ಮೀ ಅವರು ಕಳೆದ 45 ವರ್ಷಗಳಿಂದ ಹೆರಿಗೆ ಮಾಡಿಸುವ ಕೆಲಸ ಮಾಡುತ್ತಿದ್ದು, ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವಂತೆ ಅಖಿಲ ಕರ್ನಾಟಕ ಬುಡ್ಗ ಜಂಗಮ ಸಮಾಜದ ಅಧ್ಯಕ್ಷ ಬಿ.ಎಲ್.ಅಂಜಿನೇಯ ಅವರು ಸಚಿವ ಶಿವರಾಜ ತಂಗಡಗಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದ್ದು, ಸೂಲಗಿತ್ತಿ ಜಯಲಕ್ಷ್ಮಮ್ಮ ಅವರು ಸಾಂಪ್ರದಾಯಿಕ ನಾಟಿ ಔಷದೋಪಚಾರ ಮಾಡುತ್ತಾ, ಕಷ್ಟಕರ ಹೆರಿಗೆ ಸಂದರ್ಭದಲ್ಲಿ ಸಾಂಪ್ರದಾಯಿಕ ಹೆರಿಗೆ ಮಾಡಿಸುತ್ತಾರೆ. ಈವರೆಗೆ 10 ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿದ್ದಾರೆ.
ಈ ಕೆಲಸಕ್ಕೆದು ಅವರು ಕೇವಲ ಒಂದು ಸೀರೆ, ಅಕ್ಕಿ ಮತ್ತು ಕಾಣಿಕೆ ರೂಪದಲ್ಲಿ ಅಲ್ಪ ಹಣ ಮಾತ್ರ. ಇಂದಿಗೂ ಬಡವರು ಮನೆಯಲ್ಲಿನ ಹೆರಿಗೆಗೆ ಹುಡುಕಿಕೊಂಡು ಬರುತ್ತಾರೆ. ನಿಸ್ವಾರ್ಥವಾಗಿ ಸೇವೆ ನೀಡಿದ ಹಿರಿ ಜೀವಕ್ಕೆ ಪ್ರಸ್ತುತ ಕ್ಯಾನ್ಸರ್ ಕಾಯಿಲೆ ಸಮಸ್ಯೆಯಾಗಿದೆ. ಇಂತಹ ಸಾಮಾಜಿಕ ಕಳಕಳಿಯ ಸೇವೆಯನ್ನು ಗುರುತಿಸುವುದು ಅವಶ್ಯವಾಗಿದ್ದು, ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವಂತೆ ಪತ್ರದಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.