ADVERTISEMENT

ಕೋವಿಡ್‌ ಸೋಂಕಿತರೊಂದಿಗೆ ರಕ್ಷಾ ಬಂಧನ

ಬಂದಳ್ಳಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ವೈದ್ಯಕೀಯ ಸಿಬ್ಬಂದಿಯಿಂದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 15:10 IST
Last Updated 4 ಆಗಸ್ಟ್ 2020, 15:10 IST
ಯಾದಗಿರಿ ತಾಲ್ಲೂಕಿನ ಬಂದಳ್ಳಿ ಏಕಲವ್ಯ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಕೋವಿಡ್ -19 ಸೋಂಕಿತರಿಗೆ ಆರೋಗ್ಯ ಇಲಾಖಾ ಸಿಬ್ಬಂದಿ ರಕ್ಷಾ ಬಂಧನ ಆಚರಿಸಿದರು
ಯಾದಗಿರಿ ತಾಲ್ಲೂಕಿನ ಬಂದಳ್ಳಿ ಏಕಲವ್ಯ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಕೋವಿಡ್ -19 ಸೋಂಕಿತರಿಗೆ ಆರೋಗ್ಯ ಇಲಾಖಾ ಸಿಬ್ಬಂದಿ ರಕ್ಷಾ ಬಂಧನ ಆಚರಿಸಿದರು   

ಯಾದಗಿರಿ: ತಾಲ್ಲೂಕಿನ ಬಂದಳ್ಳಿ ಏಕಲವ್ಯ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಕೋವಿಡ್ -19 ಸೋಂಕಿತರಿಗೆ ಆರೋಗ್ಯ ಇಲಾಖಾ ಸಿಬ್ಬಂದಿ ರಾಖಿ ಕಟ್ಟಿ ರಕ್ಷಾ ಬಂಧನ ವಿನೂತವಾಗಿ ಆಚರಿಸಿದ್ದಾರೆ.

ಈ ವೇಳೆ ಮಾತನಾಡಿದ ಆರೋಗ್ಯ ಇಲಾಖೆ ಸಮುದಾಯ ಆರೋಗ್ಯ ಅಧಿಕಾರಿ ರಾಜಶೇಖರ ಗುಮಶೆಟ್ಟಿ, ಸೋಂಕಿತರೊಂದಿಗೆ ಸೇರಿ ಹಬ್ಬ ಆಚರಿಸುವ ಮೂಲಕ ಸೋಂಕಿತರಿಗೆ ಮಾನಸಿಕವಾಗಿ ಆತ್ಮಸ್ಥೈರ್ಯ ತುಂಬಿ ಹಬ್ಬ ಹರಿದಿನಗಳ ಕುರಿತು ಜಾಗೃತಿ ಹಾಗೂ ಬಾಂಧವ್ಯ ಬೆಸೆಯುವ ಕೆಲಸ ಮಾಡಲಾಗುತ್ತಿದೆ. ಜೊತೆಗೆ ಮಾನಸಿಕವಾಗಿ ಅವರನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು.

ಈ ವೇಳೆ ವೈದ್ಯರಾದ ಡಾ.ಸೀಮಾ ಪಟ್ಟಣಶೆಟ್ಟಿ, ಡಾ.ಸಿದ್ದರಾಜ, ಸಿಎಚ್‌ಒ ಸಿದ್ದಮ್ಮ ನಾಗರಡ್ಡಿ, ಮಲ್ಲಿಕಾರ್ಜುನ ಬೆನ್ನೂರು, ಅಮರಗುಂಡೇಶ್ವರಿ, ಮಂಜೂರು ಪಟೇಲ್, ದಿನೇಶ ಕಾಕರೆ, ಕ್ರಿಸ್ಟೋಫರ್, ಪ್ರಕೃತಿ ಹೇರೂರು, ಮೀನಾಕ್ಷಿ, ಆನಂದ ಸಜ್ಜನ್, ವಿಲ್ಸ್ ಮಾಳಪ್ಪ ಯಾದವ, ನವೀನ ಪಾಟೀಲ, ಅನಿಲ, ಪೆಂಚಾಲ ಪ್ರಸಾದ, ಶರಣಬಸವ, ವಿಶಾಲ, ಖಾಸಿಂ, ಸದಾನಂದ, ಅಮಿನ್‌ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.