ಗೆದ್ದಲಮರಿ ತಾಂಡಾ (ಹುಣಸಗಿ): ಸತ್ಯ, ನಂಬಿಕೆ ಮತ್ತು ವಿಶ್ವಾಸಕ್ಕೆ ಹೆಸರಾಗಿರುವ ಬಂಜಾರಾ ಸಮಾಜ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕಿದ್ದು, ಈ ನಿಟ್ಟಿನಲ್ಲಿ ಉನ್ನತ ಹುದ್ದೆಯಲ್ಲಿರುವವರು ಚಿಂತನೆ ನಡೆಸುವುದು ಅಗತ್ಯವಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.
ಹುಣಸಗಿ ತಾಲ್ಲೂಕಿನ ಗೆದ್ದಲಮರಿ ತಾಂಡಾದಲ್ಲಿ ಭಾನುವಾರ ಜರುಗಿದ ಸಂತ ಸೇವಾಲಾಲ ಮಹಾರಾಜರ 282ನೇಯ ಜಯಂತ್ಯುತ್ಸವ ಹಾಗೂ ರಾಮರಾವ ಮಹಾರಾಜರ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದಲ್ಲಿ ಮಾತ್ರ ಎಲ್ಲ ರಂಗದಲ್ಲಿಯೂ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ನನ್ನ ರಾಜಕೀಯ ಜೀವನದಲ್ಲಿ ಬಂಜಾರಾ ಸಮುದಾಯವು ಕೂಡಾ ನನ್ನ ಕುಟುಂಬದಂತೆ ಅವಿಭಾಜ್ಯ ಅಂಗವಾಗಿದೆ. ಚುನಾವಣೆಯಲ್ಲಿ ಸೋಲು ಗೆಲುವುಗಳಲ್ಲಿ ಭಾಗಿಯಾಗುವ ಬಂಜಾರ ಸಮುದಾಯದ ಋಣ ತೀರಿಸಲಾಗದು. ಆದರೂ ಕೂಡಾ ನಾನು ಶಾಸಕನಾಗಿದ್ದ ಅವಧಿಯಲ್ಲಿ ತಾಲ್ಲೂಕಿನ ಬಹುತೇಕ ತಾಂಡಾಗಳಿಗೆ ಹಲವು ಅಭಿವೃದ್ದಿ ಕಾಮಗಾರಿಗಳನ್ನು ಮಾಡಿದ್ದೇನೆ ಎಂದು ಹೇಳಿದರು.
ವಜ್ಜಲತಾಂಡಾದ ಸೇವಾಲಾಲ ಆಶ್ರಮದ ವಿಠ್ಠಲ್ ಮಹಾರಾಜರು ಮತ್ತು ಲಿಂಗಸೂಗೂರಿನ ವಿಜಯಮ ಹಾಂತೇಶ್ವರ ಶಾಖಾಮಠದ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ, ಇಂದು ತಾಂಡಾಗಳ ಜನರು ಸಮಾಜಮುಖಿಯಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ತಾಂಡಾದ ಜನ ದುಷ್ಚಟಗಳಿಂದ ದೂರವಾಗಿ ರಾಮರಾವ ಮಹಾರಾಜರು ಹಾಕಿಕೊಟ್ಟ ಮಾರ್ಗದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ, ಮೌಲ್ಯಯುತ ಶಿಕ್ಷಣ ನೀಡಿ ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ತಾಂಡಾದ ಸೇವಾಲಾಲ ದೇವಸ್ಥಾನದಿಂದ ಮುಖ್ಯ ವೇದಿಕೆಯ ವರೆಗೆ ಮೆರವಣಿಗೆ
ಜರುಗಿತು.
ಯಾದಗಿರಿ ಶಿವಪಾರ್ವತಿ ಭೀಮಾ ಮಹಾರಾಜರು, ಭೀಮಾನಾಯಕ ಗೊವಿಂದ ಪೂಜಾರಿ, ಶ್ರೀ ಶ್ರೀಕಾಂತ ಗೂರುಜಿ, ಪರಶುರಾಮ ಮಹಾರಾಜರು, ಕೃಷ್ಣಾನಾಯಕ ಮಹಾರಾಜರು, ಬಂಜಾರ ಸಮಾಜದ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ ಡಿ.ಆರ್. ಸುಭಾಸ್ ರಾಠೋಡ್, ಮುಖಂಡರಾದ ವಿಠ್ಠಲ್ ಯಾದವ, ನಾಗಣ್ಣ ಸಾಹು ದಂಡಿನ, ರಾಜಾ ರೂಪಕುಮಾರನಾಯಕ, ರಾಜಾ ವೇಣುಗೋಪಾಲ ನಾಯಕ, ರಾಜಾ ಕುಮಾರನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೌಡಪ್ಪಗೌಡ ಕುಪ್ಪಿ, ಶಂಕರ ಚವ್ವಾಣ, ಗಾಯಕ ಹಣಮಂತ ಚಿಲ್ಲುರಬಟ್ಟಿ ತಾಂಡಾ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ನಿಂಗಾನಾಯ್ಕ, ಮಾನಸಿಂಗ್ ಚವ್ಹಾಣ, ಚಂದ್ರಶೇಖರ, ಗುಂಡಪ್ಪ ಸೊಲ್ಲಾಪೂರ, ಆರ್.ಎಂ.ರೇವಡಿ, ರವಿಚಂದ್ರ ಆಲ್ದಾಳ, ಎಂ.ಎಂ.ಖಾಜಿ, ಶಂಕರ ಚವ್ಹಾಣ,ಮಹೇಶ ಮೂದನೂರ, ಶಂಕರ ಚವ್ಹಾಣ ಬೈಲಾಪೂರ ತಾಂಡಾ, ಚಂದಪ್ಪ ಜಾಧವ, ರಾಮುನಾಯಕ, ಸಂತೋಷ ಪವ್ಹಾರ್, ಶಾಂತಿಲಾಲ ರಾಜನ ಕೋಳುರ, ಯಮನಪ್ಪ ದೋರಿ, ಸೋಮನಿಂಗ ಪವ್ಹಾರ, ಸೋಮಣ್ಣ, ಮೋತಿಲಾಲ, ಬಂಜಾರ ಸಮುದಾಯದ ಪ್ರಮುಖರು ಇದ್ದರು.
ಕೃಷ್ಣಾ ಜಾಧವ ಪ್ರಸ್ತಾವಿಕ ಮಾತನಾಡಿದರು. ತಾರಾನಾಥ ಚವ್ಹಾಣ ನಿರೂಪಿಸಿದರು. ಗುಂಡುರಾವ ಜಾಧವ ಸ್ವಾಗತಿಸಿದರು. ಶಾಂತಿಲಾಲ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.