ADVERTISEMENT

ಯಾದಗಿರಿ | 1.700 ಕೆ.ಜಿ.ಯ ನಾಣ್ಯ, ಶತಮಾನದ ಹಿಂದಿನ ಕ್ಯಾಮೆರಾ!

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 8:13 IST
Last Updated 31 ಡಿಸೆಂಬರ್ 2025, 8:13 IST
ಯಾದಗಿರಿಯಲ್ಲಿ ಮಂಗಳವಾರ ನಡೆದ ವೈಜ್ಞಾನಿಕ ಸಮ್ಮೇಳನದ ವಸ್ತು ಪ್ರದರ್ಶನದಲ್ಲಿ ಇರಿಸಲಾದ ನಾಣ್ಯಗಳು
ಯಾದಗಿರಿಯಲ್ಲಿ ಮಂಗಳವಾರ ನಡೆದ ವೈಜ್ಞಾನಿಕ ಸಮ್ಮೇಳನದ ವಸ್ತು ಪ್ರದರ್ಶನದಲ್ಲಿ ಇರಿಸಲಾದ ನಾಣ್ಯಗಳು   

ಯಾದಗಿರಿ: ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆ ಅವಧಿಯಲ್ಲಿನ 1.700 ಕೆ.ಜಿ.ಯ ದೊಡ್ಡ ನಾಣ್ಯ, ಬರೋಬರಿ 195 ದೇಶಗಳ ನೋಟುಗಳು ಹಾಗೂ ನಾಣ್ಯಗಳು, 7 ಕೆ.ಜಿ. ತೂಕದ ಗಡಿಯಾರ, ಶತಮಾನದ ಹಿಂದಿನ ಹತ್ತಾರು ಕ್ಯಾಮೆರಾಗಳು, ನಾವಿಕರು ಬಳಸುತ್ತಿದ್ದ ದಿಕ್ಸೂಚಿಗಳನ್ನು ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದರು.

ವೈಜ್ಞಾನಿಕ ಸಮ್ಮೇಳನದಲ್ಲಿ ವಿಜಯಪುರ ಮೂಲದ ನಿವೃತ್ತ ಮುಖ್ಯೋಪಾಧ್ಯಾಯ ನಂದೀಶ್ ಅವರು ತಾವು ಸಂಗ್ರಹಿಸಿದ ನೂರಾರು ಅಪರೂಪದ ವಸ್ತುಗಳನ್ನು ಪ್ರದರ್ಶನದಲ್ಲಿ ಇರಿಸಿದರು.

ಗಂಗರು, ಕದಂಬರು, ಚಾಲುಕ್ಯರು, ಚೋಳರ, ವಿಜಯನಗರ ಅರಸರು ಸೇರಿದಂತೆ ಇತರೆ ಸಾಮ್ರಾಜ್ಯಗಳ ಕಾಲದ ವಿವಿಧ ಬಗೆಯ ನಾಣ್ಯಗಳು, ಅಮೆರಿಕಾ, ಚೀನಾ, ಜಪಾನ್, ಫ್ರಾನ್ಸ್, ವಿಯೆಟ್ನಾಂ, ನೇಪಾಳ, ಇಂಡೋನೇಷಿಯಾ, ಬಾಂಗ್ಲಾದೇಶ, ರಷ್ಯಾ, ದೇಶದ ನಾಣ್ಯಗಳು ಇಟ್ಟಿದ್ದರು.

ADVERTISEMENT

ಪುರಾತನ ಕಾಲದ ಹಿತ್ತಾಳೆ ಮತ್ತು ಲೋಹದ ಚೊಂಬುಗಳು, ಕಂಚಿನಿಂದ ತಯಾರಾದ ಓಂಕಾರ ನಾದವನ್ನು ಹೊರ ಹೊಮ್ಮಿಸುವ ಬಟ್ಟಲುಗಳು, ಹಳೇ ಕಾಲದಲ್ಲಿ ಬಳಸುತ್ತಿದ್ದ ಹಿತ್ತಾಳೆ, ತಾಮ್ರದ ಲೋಟ, ತಟ್ಟೆ, ಟಿಫನ್ ಕ್ಯಾರಿಯರ್‌ಗಳು, ಆರತಿ ತಟ್ಟೆಗಳು, ಭಾರತ, ಜಪಾನ್, ಚೀನಾ, ಜರ್ಮನಿ, ಬ್ರಿಟನ್ ನಾವಿಕರು ಬಳಸುತ್ತಿದ್ದ ದಿಕ್ಸೂಚಿಗಳು, ದೂರದರ್ಶಕಗಳು, ಪಂಚ ಲೋಹದ ವಿಗ್ರಹಗಳು, ರಾಜರು ಮದುಪಾನ ಮಾಡಲು ಬಳಸುತ್ತಿದ್ದ ಹಿತ್ತಾಳೆಯ ಹೂಜಿಗಳು ವಿದ್ಯಾರ್ಥಿಗಳ ಗಮನ ಸೆಳೆದವು.

ಯಾದಗಿರಿಯಲ್ಲಿ ಮಂಗಳವಾರ ನಡೆದ ವೈಜ್ಞಾನಿಕ ಸಮ್ಮೇಳನದ ವಸ್ತು ಪ್ರದರ್ಶನದಲ್ಲಿ ಇರಿಸಲಾದ ಗಡಿಯಾರ
ನಂದೀಶ್

ವಿದ್ಯಾರ್ಥಿಗಳಿಗೆ ನಮ್ಮ ಪೂರ್ವಿಕರು ಬಳಸುತ್ತಿದ್ದ ವಸ್ತುಗಳು ನಾಣ್ಯಗಳು ಪರಿಚಯವಾಗಿ ಅವುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೂಡಿಸಲು ಪ್ರದರ್ಶನಕ್ಕೆ ಇರಿಸಿದ್ದೇನೆ

-ನಂದೀಶ್ ಹವ್ಯಾಸಿ ನಾಣ್ಯ ಸಂಗ್ರಹಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.