ಶಹಾಪುರ: ‘ಕೋವಿಡ್ ಹಿನ್ನೆಲೆ ಉಂಟಾದ ಹಿನ್ನಡೆಯನ್ನು ಸರಿಪಡಿಸಲು ಕಲಿಕಾ ಚೇತರಿಕೆ ಅನುಷ್ಟಾನಕ್ಕೆ ತರಲಾಗಿದೆ. ಅದರ ಮುಂದುವರಿದ ಭಾಗವಾಗಿ ಕಲಿಕಾ ಹಬ್ಬ ತಾಲ್ಲೂಕಿನ ದಕ್ಷಿಣ ಕ್ಲಸ್ಟರ್ ಶಾಲೆಗಳಲ್ಲಿ ನಡೆಯುತ್ತಿದೆ’ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ರೇಣುಕಾ ಪಾಟೀಲ ತಿಳಿಸಿದರು.
ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿಆರ್‌ಪಿ ವೀರಭದ್ರಯ್ಯ ಸ್ವಾಮಿ ಮಾತನಾಡಿದರು.
ಬಾಲಕರ ಪ್ರೌಢಶಾಲೆಯ ಮುಖ್ಯಶಿಕ್ಷಕ ಮಲ್ಲನಗೌಡ ಬಿರಾದಾರ, ಬಿ.ಹೆಚ್.ಸೂರ್ಯವಂಶಿ, ವೆಂಕೋಬಾ ಪಾಟೀಲ, ಶರಣಪ್ಪ ಪಾಟೀಲ, ಈರಯ್ಯ ಹಿರೇಮಠ, ಎಸ್‌ಡಿಎಮ್‌ಸಿ ಅಧ್ಯಕ್ಷೆ ಸೌಭಾಗ್ಯ, ಲಕ್ಷ್ಮಣ ಲಾಳಸೇರಿ, ಸಂಪನ್ಮೂಲ ವ್ಯಕ್ತಿಗಳಾದ ಅಶ್ವಿನಿ ಜೋಶಿ, ಗುರುಬಸವ, ಪ್ರಭಾವತಿ, ರುದ್ರಪ್ಪ, ಲಕ್ಷ್ಮಿಬಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.