ADVERTISEMENT

ಯಾದಗಿರಿಯಲ್ಲಿ ಸುಧಾ ವಾರ ಪತ್ರಿಕೆಯ ಯುಗಾದಿ ವಿಶೇಷಾಂಕ ಬಿಡುಗಡೆ

ಓದು ಹೆಚ್ಚಿಸುವ ಚಿತ್ರಗಳು: ವಿಲಾಸ ಪಾಟೀಲ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 4:21 IST
Last Updated 10 ಏಪ್ರಿಲ್ 2021, 4:21 IST
ಪ್ರಜಾವಾಣಿ --–ಡೆಕ್ಕನ್ ಹೆರಾಲ್ಡ್ ಬಳಗದ ಸುಧಾ ವಾರಪತ್ರಿಕೆಯ ‘ಯುಗಾದಿ ವಿಶೇಷಾಂಕ’ವನ್ನು ಯಾದಗಿರಿ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್, ಪೌರಾಯುಕ್ತ ಭೀಮಣ್ಣ ನಾಯಕ ಬಿಡುಗಡೆ ಮಾಡಿದರು
ಪ್ರಜಾವಾಣಿ --–ಡೆಕ್ಕನ್ ಹೆರಾಲ್ಡ್ ಬಳಗದ ಸುಧಾ ವಾರಪತ್ರಿಕೆಯ ‘ಯುಗಾದಿ ವಿಶೇಷಾಂಕ’ವನ್ನು ಯಾದಗಿರಿ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್, ಪೌರಾಯುಕ್ತ ಭೀಮಣ್ಣ ನಾಯಕ ಬಿಡುಗಡೆ ಮಾಡಿದರು   

ಯಾದಗಿರಿ: ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಬಳಗದ ಸುಧಾ ವಾರಪತ್ರಿಕೆಯ ‘ಯುಗಾದಿ ವಿಶೇಷಾಂಕ’ವನ್ನು ಯಾದಗಿರಿ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್, ಪೌರಾಯುಕ್ತ ಭೀಮಣ್ಣ ನಾಯಕ ನಗರಸಭೆಯಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅಧ್ಯಕ್ಷ ವಿಲಾಸ ಪಾಟೀಲ, ‘ಪ್ರಜಾವಾಣಿ ಸಂಸ್ಥೆ ವತಿಯಿಂದ ಹೊರ ತರುವ ಪತ್ರಿಕೆಗಳು, ಪುಸ್ತಕಗಳು ಉತ್ತಮ ಪುಟ ವಿನ್ಯಾಸ ಹೊಂದಿರುತ್ತವೆ. ಜೊತೆಗೆ ಸುದ್ದಿ, ಕಥೆ, ಕವನಗಳು ಓದಿಸಿಕೊಂಡು ಹೋಗುತ್ತವೆ. ಯುಗಾದಿ ವಿಶೇಷಾಂಕದಲ್ಲಿ ಉತ್ತಮ ಚಿತ್ರಗಳನ್ನು ಚಿತ್ರಿಸಲಾಗಿದೆ’ ಎಂದರು.

‘ಯುಗಾದಿ ವಿಶೇಷಾಂಕದಲ್ಲಿನ ಬಹುಮಾನಿತ ಕಥೆಗಳು, ಸೆಲೆಬ್ರೆಟಿ ಸಣ್ಣಕತೆ, ದೊಡ್ಡವರು ಓದಬೇಕಾದ ಮಕ್ಕಳ ಕಥೆಗಳು, ಕಾವ್ಯ ವಸಂತ, ಕಥಾ ಚೈತ್ರಾ ಸೇರಿದಂತೆ ವಿವಿಧ ಬರಹಗಳು ಓದುವಿಕೆಯನ್ನು ಹೆಚ್ಚಿಸುತ್ತವೆ’ ಎಂದರು.

ADVERTISEMENT

ನಗರಸಭೆ ಪೌರಾಯುಕ್ತ ಭೀಮಣ್ಣ ನಾಯಕ ಮಾತನಾಡಿ, ‘ಪತ್ರಿಕೆಗಳು ವ್ಯಕ್ತಿಯ ಜೀವನವನ್ನು ರೂಪಿಸುತ್ತವೆ. ಪತ್ರಿಕೆಯಲ್ಲಿ ಪ್ರಕಟವಾಗಿರುವ ಅಧಿಸೂಚನೆಯನ್ನು ನೋಡಿಯೇ ಹಲವಾರು ಉದ್ಯೋಗ ಆಕಾಂಕ್ಷಿಗಳು ಸರ್ಕಾರಿ ಸೇವೆಗೆ ಸೇರಿದ್ದಾರೆ. ಪತ್ರಿಕೆಗಳು ಜ್ಞಾನದ ಜೊತೆಗೆ ಜೀವನಕ್ಕೆ ಉತ್ತಮ ಮಾರ್ಗದರ್ಶನ ರೂಪಿಸುವ ಕೆಲಸ ಮಾಡುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ಪತ್ರಿಕೆಗಳ ಮೂಲಕ ಸಮಾಜದ ಹಾಗುಹೋಗುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ನಗರದ ಸಮಸ್ಯೆಗಳೂ ಅರಿವಿಗೆ ಬರುತ್ತವೆ’ ಎಂದರು.

ಈ ವೇಳೆ ‘ಪ್ರಜಾವಾಣಿ’ ಜಿಲ್ಲಾ ವರದಿಗಾರ ಬಿ.ಜಿ.ಪ್ರವೀಣಕುಮಾರ, ಜಾಹೀರಾತು ವಿಭಾಗದ ಪರಮೇಶರಡ್ಡಿ, ಪ್ರಸರಣ ವಿಭಾಗದ ಶರಣಗೌಡ ಅರಿಕೇರಿ, ಛಾಯಾಗ್ರಾಹಕ ರಾಜಕು ಮಾರ ನಳ್ಳಿಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.