ಶಹಾಪುರ: ನಾರಾಯಣಪುರ ಎಡದಂಡೆ ಕಾಲುವೆಗೆ ಜನವರಿ ಕೊನೆವರೆಗೆ ನೀರು ಹರಿಸಬೇಕು. ಬೆಳೆದು ನಿಂತ ಪೈರು ರಕ್ಷಿಸಬೇಕು ಎಂದು ಆಗ್ರಹಿಸಿ ಬುಧವಾರ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು, ಕೆಬಿಜೆಎನ್‌ಎಲ್ ನಿಗಮದ ಭೀಮರಾಯನಗುಡಿ ಮುಖ್ಯ ಎಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದರು.
ಬೆಳೆದು ನಿಂತಿರುವ ಹತ್ತಿ, ಮೆಣಸಿನಕಾಯಿ, ಶೇಂಗಾ, ಜೋಳ, ತೊಗರಿ, ಮೆಕ್ಕಿಜೋಳ ಮುಂತಾದ ಬೆಳೆ ಕೈಗೆ ಬರಬೇಕಾದರೆ ಜನವರಿ ಕೊನೆಯವರೆಗೆ ನೀರು ಹರಿಸಬೇಕು. ಈಗಾಗಲೇ ಮೆಣಸಿನಕಾಯಿ ಬೆಳೆಗೆ ಸಾವಿರಾರು ರೂಪಾಯಿ ರೈತರು ವೆಚ್ಚ ಮಾಡಿದ್ದಾರೆ. ನೀರು ಸ್ಥಗಿತಗೊಂಡರೆ ರೈತರು ತುಂಬಾ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ರೈತ ಮುಖಂಡರು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಚೆನ್ನಪ್ಪ ಆನೇಗುಂದಿ, ಎಸ್.ಎಂ. ಸಾಗರ, ಭೀಮಣ್ಣ ರಸ್ತಾಪುರ, ಶರಣು ಮಂದ್ರವಾಡ, ಭೀಮರಾಯ ಪೂಜಾರಿ, ಮಲ್ಲಿಕಾರ್ಜುನ ಅರಳಹಳ್ಳಿ, ಶರಣಗೌಡ ಬೇವಿನಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.