ಗುರುಮಠಕಲ್ (ಯಾದಗಿರಿ ಜಿಲ್ಲೆ): ಸಂಬಂಧಿಕರ ಮದುವೆ ವೇದಿಕೆಯಲ್ಲಿ ಮದುಮಗಳೊಡನೆ ಅಸಭ್ಯ ವರ್ತನೆ ತೋರಿದಕ್ಕೆ ರೌಡಿಶೀಟರ್ ನನ್ನು ಕೊಲೆ ಮಾಡಿದ ಘಟನೆ ಸೋಮವಾರ ಜರುಗಿದೆ.
ಕೊಲೆಯಾದವನು ಗುರುಮಠಕಲ್ ತಾಲ್ಲೂಕಿನ ಚಿನ್ನಾಕಾರ ಗ್ರಾಮದ ಮಹಮ್ಮದ್ ಹನೀಫ್ (34) ಎಂದು ಗುರುತಿಸಲಾಗಿದೆ.
ಸೋಮವಾರ ತಾಲ್ಲೂಕಿನ ಪರಮೇಶಪಲ್ಲಿಯ ರಸೂಲ್ ಮಗಳ ಮದುವೆಗೆ ಹೋಗಿದ್ದ ಮಹಮ್ಮದ್ ಹನೀಫ್ ಮದುಮಗಳೊಡನೆ ಅಸಭ್ಯವಾಗಿ ವರ್ತಿಸುತ್ತಿರುವುದಕ್ಕೆ ಬೇಸತ್ತ ರಸೂಲ್ ಹಾಗೂ ಆತನ ಮಕ್ಕಳಾದ ಗುಲಾಮ್, ಇರ್ಫಾನ್ ಹಾಗೂ ಹಾರೂನ್ ಜೊತೆಗೂಡಿ ರೌಡಿಶೀಟರ್ ಹನೀಫ್ ನನ್ನು ಕೊಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.
ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.