ADVERTISEMENT

ಆರ್‌ವಿ ವಿದ್ಯಾ ಸಂಸ್ಥೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 19 ಮೇ 2022, 16:35 IST
Last Updated 19 ಮೇ 2022, 16:35 IST
ಅಂಕಿತಾ ಪಾಟೀಲ 622 (99.52)
ಅಂಕಿತಾ ಪಾಟೀಲ 622 (99.52)   

ಯಾದಗಿರಿ: ನಗರದ ರಾಚೋಟಿ ವೀರಣ್ಣ (ಆರ್.ವಿ) ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಈ ವರ್ಷವೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮುಂದುವರಿಸಿದ್ದಾರೆ.

ಅಂಕಿತಾ ಪಾಟೀಲ, ಸುಮಾ 625 ಕ್ಕೆ 622 ಅಂಕ ಪಡೆದು ಶೇ 99.52 ರಷ್ಟು ಫಲಿತಾಂಶವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾದ 146 ಮಕ್ಕಳಲ್ಲಿ ಡಿಸ್ಟಿಂಕ್ಷನ್ 52, ಪ್ರಥಮ ದರ್ಜೆ 75, ದ್ವಿತೀಯ ದರ್ಜೆ 11, 4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳು: ಇಂಗ್ಲೀಷ್ 125ಕ್ಕೆ 125 ಒಬ್ಬ ವಿದ್ಯಾರ್ಥಿ, ಕನ್ನಡ 100ಕ್ಕೆ 100 14 ವಿದ್ಯಾರ್ಥಿಗಳು, ಹಿಂದಿ 100ಕ್ಕೆ 100 12 ವಿದ್ಯಾರ್ಥಿಗಳು, ವಿಜ್ಞಾನ 100ಕ್ಕೆ 100 5 ವಿದ್ಯಾರ್ಥಿಗಳು, ಗಣಿತ 100 ಕ್ಕೆ100 6 ವಿದ್ಯಾರ್ಥಿಗಳು,19 ವಿದ್ಯಾರ್ಥಿಗಳು ಸಮಾಜ ವಿಜ್ಞಾನದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.

ADVERTISEMENT

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷೆ ಕಮಲಾ ಎನ್ ದೇವರ್‌ಕಲ್ ಶುಭ ಹಾರೈಸಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.