ADVERTISEMENT

ಅದ್ದೂರಿ ಶೋಭಾಯಾತ್ರೆ; ಹಿಂದೂ ಮಹಾಗಣಪತಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 15:52 IST
Last Updated 28 ಸೆಪ್ಟೆಂಬರ್ 2024, 15:52 IST
ಯಾದಗಿರಿಯಲ್ಲಿ ಶನಿವಾರ ಮಹಾ ಗಣಪತಿ ವಿಸರ್ಜನೆ ಅಂಗವಾಗಿ ಶೋಭಾಯಾತ್ರೆ ನಡೆಯಿತು
ಯಾದಗಿರಿಯಲ್ಲಿ ಶನಿವಾರ ಮಹಾ ಗಣಪತಿ ವಿಸರ್ಜನೆ ಅಂಗವಾಗಿ ಶೋಭಾಯಾತ್ರೆ ನಡೆಯಿತು   

ಯಾದಗಿರಿ: ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಹಾಗೂ ಭಜರಂಗದಳ ಆಶ್ರಯದಲ್ಲಿ ಜೈ ಭವಾನಿ ದೇವಸ್ಥಾನದ ಹತ್ತಿರ ಸ್ಥಾಪಿಸಿದ್ದ ಮಹಾ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಶನಿವಾರ ಅದ್ದೂರಿ ಶೋಭಾಯಾತ್ರೆ ನಡೆಯಿತು.

ನಾಗಾ ಸಾಧುಗಳ ಉತ್ಸಾಹ, ಬಾಯಿಂದ ಬೆಂಕಿ ಉಗುಳುವ ಸಾಹಸ ಕ್ರೀಡೆ ಗಮನ ಸೆಳೆಯಿತು.

ಮೆರವಣಿಗೆಯುದ್ದಕ್ಕೂ ರಾಮ-ಲಕ್ಷ್ಮಣ, ಆಂಜನೇಯ, ಕನ್ನಡಾಂಭೆ ಭಾವಚಿತ್ರ, ಛತ್ರಪತಿ ಶಿವಾಜಿ ಪ್ರತಿಮೆ, ವಿವಿಧ ಸ್ಥಬ್ಧ ಚಿತ್ರಗಳು ಗಮನ ಸೆಳೆದವು. ಡಿಜೆ ಹಾಡುಗಳಿಗೆ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ADVERTISEMENT

ಪದವಿ ಕಾಲೇಜು, ನೇತಾಜಿ ವೃತ್ತ, ಶಾಸ್ತ್ರೀ ವೃತ್ತ, ಡಾ.ಬಿ.ಅಂಬೇಡ್ಕರ್‌ ವೃತ್ತ, ವೀರಶೈವಕಲ್ಯಾಣ ಮಂಟಪ, ಗಾಂಧಿವೃತ್ತ, ಚಕ್ರಕಟ್ಟಾ, ಮೈಲಾಪೂರ ಅಗಸಿ ಮೂಲಕ ಪಟಾಕಿ ಸಿಡಿಸುತ್ತಾ ನಗರಕ್ಕೆ ಹೊಂದಿಕೊಂಡಿರುವ ದೊಡ್ಡಕೆರೆಯ ಹತ್ತಿರವಿರುವ ಮಾರವಾಡಿ ಭಾವಿಯಲ್ಲಿ ತಡರಾತ್ರಿ ವಿಸರ್ಜನೆ ಮಾಡಲಾಯಿತು.

ಮೆರವಣಿಗೆಯಲ್ಲಿ ಸಮಿತಿಯ ಅಧ್ಯಕ್ಷ ಶರಣಪ್ಪಗೌಡ ಮಲ್ಹಾರ, ಭಜರಂಗದಳದ ಶಿವಕುಮಾರ, ತಿಮ್ಮಣ್ಣ ಹೂಗಾರ ಹೆಚ್ಚಿನ ಸಂಖ್ಯೆಯ ಭಾಗವಹಿಸಿದ್ದರು. ಹೆಚ್ಚಿನ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ನಾಗಾ ಸಾಧುಗಳು ಬಾಯಿಂದ ಬೆಂಕಿ ಉಗುಳಿದರು
ಮೆರವಣಿಗೆಯಲ್ಲಿ ಗಮನ ಸೆಳೆದ ಹನುಮನ ಪ್ರತಿಕೃತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.