ADVERTISEMENT

ಸೈದಾಪುರ-ವಡಗೇರಾ ಮಧ್ಯ ರಸ್ತೆ ಸಂಚಾರ ಸ್ಥಗಿತ

ನದಿಯ ಹಿನ್ನೀರಿನ ಅಬ್ಬರಕ್ಕೆ ಕೊಚ್ಚಿ ಹೋದ ರಸ್ತೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 4:13 IST
Last Updated 4 ಅಕ್ಟೋಬರ್ 2025, 4:13 IST
ಸೈದಾಪುರದಿಂದ ವಡಗೇರಾ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನದಿ ಪ್ರವಾಹಕ್ಕೆ ಹಾಳಾಗಿರುವುದು
ಸೈದಾಪುರದಿಂದ ವಡಗೇರಾ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನದಿ ಪ್ರವಾಹಕ್ಕೆ ಹಾಳಾಗಿರುವುದು   

ಸೈದಾಪುರ: ‘ಭೀಮಾ ನದಿಯ ಹಿನ್ನೀರಿನ ಅಬ್ಬರಕ್ಕೆ ಸೈದಾಪುರ–ವಡಗೇರಾ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ. ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಸಮೀಪದ ಬೆಳಗುಂದಿ, ಆನೂರ.ಕೆ, ಆನೂರ.ಬಿ ಮಾರ್ಗದ ಮೂಲಕ ಕಂದಳ್ಳಿ, ಬಿಳ್ಹಾರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ನಿತ್ಯ ಅನೇಕರು ವಿವಿಧ ಕೆಲಸ ಕಾರ್ಯಗಳಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಶಾಲಾ ಕಾಲೇಜುಗಳು ಕೆಲ ದಿನಗಳಲ್ಲಿ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರ ವಹಿವಾಟು ಕೇಂದ್ರವಾದ ಸೈದಾಪುರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಮಾರ್ಗದ ಮೂಲಕ ಪ್ರಯಾಣಿಸುತ್ತಿದ್ದರು. ರಸ್ತೆ ಮೇಲೆ ದೊಡ್ಡ ತಗ್ಗು ನಿರ್ಮಾಣವಾಗಿದ್ದರಿಂದ ಸರ್ಕಾರಿ ಬಸ್‌ಗಳು ತಮ್ಮ ಸಂಚಾರನ್ನು ಸ್ಥಗಿತಗೊಳಿಸಿವೆ.

ADVERTISEMENT

ಶೀಘ್ರದಲ್ಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.

ಪ್ರವಾಹದಿಂದ ಒಂದು ಕಡೆ ಬೆಳೆ ಹಾನಿ ಇನ್ನೊಂದು ಕಡೆ ಮೂಲಸೌಕರ್ಯಗಳ ಸಮಸ್ಯೆ ಕಂಡು ಬರುತ್ತಿವೆ. ಈ ಸ್ಥಿತಿ ಹೀಗೆ ಮುಂದುವರೆದರೆ ಬದುಕು ಸಾಗಿಸುವುದು ಹೇಗೆ ಎಂದು ಗ್ರಾಮಸ್ಥರು ಅಳಲು ತೊಡಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.