ADVERTISEMENT

ಸೇವಾ ನ್ಯೂನತೆ: ಎಸ್‌ಬಿಐಗೆ ದಂಡ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 23:30 IST
Last Updated 5 ಸೆಪ್ಟೆಂಬರ್ 2025, 23:30 IST
ಎಸ್‌ಬಿಐ
ಎಸ್‌ಬಿಐ   

ಯಾದಗಿರಿ: ಸೇವಾ ನ್ಯೂನತೆಯಿಂದ ಗ್ರಾಹಕರು ಕಳೆದುಕೊಂಡಿದ್ದ ₹50 ಸಾವಿರ ಮತ್ತು ಮಾನಸಿಕ ಹಿಂಸೆಗೆ ₹10 ಸಾವಿರ, ಪ್ರಕರಣದ ವೆಚ್ಚ ₹5 ಸಾವಿರ ಸೇರಿ ₹65 ಸಾವಿರ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಎಸ್‌ಬಿಐಗೆ ಆದೇಶಿಸಿದೆ.

ಸೈಬರ್ ವಂಚಕರು ಖಾತೆದಾರರಿಗೆ ಗೊತ್ತಾಗದಂತೆ ₹50 ಸಾವಿರ ವರ್ಗಾವಣೆ ಮಾಡಿಕೊಂಡಿದ್ದರು. ಬ್ಯಾಂಕ್‌ ಸಿಬ್ಬಂದಿ ಈ ಬಗ್ಗೆ ಸರಿಯಾಗಿ ಸ್ಪಂದಿಸಿರಲಿಲ್ಲ. ಗ್ರಾಹಕ, ನಿವೃತ್ತ ಉಪನ್ಯಾಸಕ ಸಿ.ಎಂ. ಪಟೇದಾರ ಅವರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ಆಯೋಗ, ಬ್ಯಾಂಕ್‌ನ ಸೇವಾ ನ್ಯೂನತೆಯಿಂದಾಗಿ ದೂರುದಾರ ಹಣ ಕಳೆದು
ಕೊಂಡಿದ್ದಾರೆ. 45 ದಿನಗಳಲ್ಲಿ ₹65 ಸಾವಿರ ಪಾವತಿಸಬೇಕು. ಆದೇಶದ ದಿನದಿಂದ ಹಣ ಪಾವತಿ ಆಗುವವರೆಗೆ ಶೇ 8ರಷ್ಟು ಬಡ್ಡಿ ಸಹ ನೀಡಬೇಕು ಎಂದು ಆದೇಶಿಸಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.