ಸುರಪುರ: ‘ನಮ್ಮ ಸಂಘಟನೆಯ ರಾಜ್ಯ ನಾಯಕ ಮಾವಳ್ಳಿ ಶಂಕರ್ ಅವರು ನೀಡಿದ ಅವಕಾಶ ಬಳಸಿಕೊಂಡು ಶೋಷಿತರ ಸೇವೆ ಮಾಡಲಾಗುವುದು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ರಾಜ್ಯ ಸಂಘಟನಾ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ ಹೇಳಿದರು.
ನಗರದಲ್ಲಿ ಸೋಮವಾರ ದಸಂಸಯ ತಾಲ್ಲೂಕು ಘಟಕದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ,‘ವಿಭಾಗೀಯ ಸಂಚಾಲಕನಾಗಿ ಮಾಡಿದ ಕೆಲಸ ಗುರುತಿಸಿ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಎಲ್ಲರೂ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಸಂಘಟನಾ ಸಂಚಾಲಕ ಮಾಳಪ್ಪ ಕಿರದಳ್ಳಿ ಮಾತನಾಡಿ, ‘ಕಲಬುರಗಿ ವಿಭಾಗೀಯ ಸಂಚಾಲಕರಾಗಿ ಹೋರಾಟ ಮಾಡಿ ನಮ್ಮ ಭಾಗದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿದ ರಾಮಣ್ಣ ಕಲ್ಲದೇವನಹಳ್ಳಿ ಅವರನ್ನು ರಾಜ್ಯ ಸಂಘಟನಾ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಲಾಗುವುದು’ ಎಂದು ತಿಳಿಸಿದರು.
ಮುಖಂಡ ಪ್ರಶಾಂತ ಉಗ್ರಂ ಮಾತನಾಡಿದರು.
ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದ ಜೂಡೊ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ರಾಹುಲ್ ಕಿರದಳ್ಳಿ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಸಂಚಾಲಕ ಶರಣಪ್ಪ ತಳವಾರಗೇರ, ಮಲ್ಲಿಕಾರ್ಜುನ ಹಾದಿಮನಿ, ಕೆಂಚಪ್ಪ ಕಟ್ಟಿಮನಿ, ಪ್ರಕಾಶ ಮುಷ್ಠಳ್ಳಿ, ಪರಶುರಾಮ ದೊಡ್ಮನಿ, ಮಲ್ಲಪ್ಪ ದೊಡ್ಮನಿ, ಶರಣಪ್ಪ ಕನ್ನೆಳ್ಳಿ, ಲಾಲು ಚವ್ಹಾಣ್, ವಿಶ್ವನಾಥ ಹೊಸ್ಮನಿ, ಗೊಲ್ಲಾಳಪ್ಪ ಕಟ್ಟಿಮನಿ, ಬಸವರಾಜ ಕನ್ನೆಳ್ಳಿ ಹಾಗೂ ಹಣಮಂತ ಕಿರದಳ್ಳಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.