ADVERTISEMENT

ಯಾದಗಿರಿ | ಬಾಲಕಿಗೆ ಲೈಂಗಿಕ ಕಿರಕುಳ: ಪೋಕ್ಸೊ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 16:20 IST
Last Updated 17 ಮಾರ್ಚ್ 2024, 16:20 IST
   

ಯಾದಗಿರಿ: ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ತಾಲ್ಲೂಕಿನ ತಾಂಡಾವೊಂದರ ನಿವಾಸಿ ವೆಂಕಟೇಶ್ ದೇವು ರಾಠೋಡ ವಿರುದ್ಧ ಬಾಲಕಿಯ ತಂದೆ– ತಾಯಿ ದೂರು ದಾಖಲಿಸಿದ್ದಾರೆ.

ಆರೋಪಿ ವೆಂಕಟೇಶ ತಾಂಡಾವೊಂದರ ಬಾಲಕಿಗೆ ಶಾಲೆಗೆ ಹೋಗಿ ಬರುವಾಗ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಬಾಲಕಿಯ ಅಜ್ಜಿ ಆರೋಪಿ ಮನೆಯ ಮನೆಯವರಿಗೆ ತಿಳಿವಳಿಕೆ ನೀಡಿದ್ದರು. ಆದರೂ, ಆರೋಪಿ ತನ್ನ ಚಾಳಿ ಮುಂದುವರಿಸಿದ್ದ. ಬಾಲಕಿಯ ತಂದೆ ತಾಯಿ ದೂರದ ಮಹಾನಗರದಲ್ಲಿ ದುಡಿಯಲು ಹೋಗಿದ್ದರು.

ವಿಷಯ ತಿಳಿದು ತಾಂಡಾದಲ್ಲಿ ನ್ಯಾಯ ಪಂಚಾಯಿತಿ ಮಾಡಿದ್ದರೆ ಆರೋ‍ಪಿ ಸಭೆಗೆ ಹಾಜರಾಗದೇ ತಪ್ಪಿಸಿಕೊಂಡಿದ್ದ. ಹೀಗಾಗಿ ಬಾಲಕಿ ಪೋಷಕರು ನೀಡಿದ ದೂರಿನಂತೆ ಆರೋಪಿಯ ವಿರುದ್ಧ ಕಲಂ 504, 506, 354, 354 ಎ, 354 (ಡಿ) ಐಪಿಸಿ ಕಲಂ 8, 10, 12 ಪೋಕ್ಸೊ ಕಾಯ್ದೆ ಪ್ರಕಾರ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಮಹಿಳಾ ಠಾಣೆ ಪಿಎಸ್ಐ ಅಹಮದ್ ಶರೀಫ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.