
ಹಣ
ಶಹಾಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಹುಲಕಲ್ ಗ್ರಾಮ ಸಮೀಪದ ಮಣಿಕಂಠ ಕಾಟನ್ ಜಿನ್ನಿಂಗ್ ಇಂಡಸ್ಟ್ರೀಸ್ ಮಿಲ್‌ನಲ್ಲಿ ಸೋಮವಾರ ಶಾರ್ಟ್ ಸರ್ಕಿಟ್‌ನಿಂದ ಅಗ್ನಿ ಅವಘಡ ಸಂಭವಿಸಿದ್ದು, ಭಾರಿ ಪ್ರಮಾಣದ ಹತ್ತಿ ದಾಸ್ತಾನು ಸುಟ್ಟುಹೋಗಿದೆ.
‘ಮಿಲ್‌ನಲ್ಲಿ ಸಂಜೆ 5.30 ರ ಸುಮಾರಿಗೆ ಬೆಂಕಿ ತಗುಲಿ ದಟ್ಟ ಹೊಗೆ ಆವರಿಸಿಕೊಂಡಿತು. ಬೆಂಕಿಯ ಕೆನ್ನಾಲಿಗೆಗೆ ಮಿಲ್‌ನ ಯಂತ್ರೋಪಕರಣಗಳು ಸೇರಿ ಸಾವಿರಾರು ಕ್ವಿಂಟಲ್ ಹತ್ತಿ ದಾಸ್ತಾನು ಸುಟ್ಟುಹೋಗಿದೆ. ಅಂದಾಜು ₹ 15 ಕೋಟಿ ನಷ್ಟ ಆಗಿರಬಹುದು’ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದರು.
‘ಮಿಲ್‌ನಲ್ಲಿ ದಟ್ಟ ಹೊಗೆ ಹಾಗೂ ಬೆಂಕಿಯ ಕೆನ್ನಾಲಿಗೆ ಎತ್ತರದಲ್ಲಿ ಕಾಣಿಸಿಕೊಂಡಿದ್ದರಿಂದ ತಡರಾತ್ರಿವರೆಗೆ ಕಾರ್ಯಾಚರಣೆ ನಡೆದಿದೆ. ಶಹಾಪುರ, ಯಾದಗಿರಿ ಹಾಗೂ ಜೇವರ್ಗಿ ಠಾಣೆ ಗಳಿಂದ ನೀರಿನ ವಾಹನಗಳನ್ನು ತರಿಸಲಾಗಿತ್ತು’ ಎಂದರು.
ಬೆಂಕಿ ನಂದಿಸಲು ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಹರಸಾಹಸಪಟ್ಟರು. ಮಿಲ್‌ನ ಸಿಬ್ಬಂದಿ, ಸಾರ್ವಜನಿಕರು ಬೆಂಕಿ ನಂದಿಸುವ ಕಾರ್ಯದಲ್ಲಿ ನೆರವಾದರು.
ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ಮನೋಜ ರಾಠೋಡ್, ಶಹಾಪುರ ಅಗ್ನಿಶಾಮಕ ಠಾಣಾಧಿಕಾರಿ ಮಚ್ಚೇಂದ್ರನಾಥ ತಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.