ADVERTISEMENT

ಶಹಾಪುರ: ಕೂಲಿ ಕಾರ್ಮಿಕರ ಧರಣಿ ವಾಪಸ್‌

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 5:07 IST
Last Updated 23 ಜನವರಿ 2026, 5:07 IST
ಶಹಾಪುರ ತಾ.ಪಂ.ಕಚೇರಿ ಮುಂದೆ ನಡೆಸುತ್ತಿದ್ದ ಧರಣಿಯನ್ನು ಕೂಲಿ ಕಾರ್ಮಿಕರು ಗುರುವಾರ ಹಿಂಪಡೆದರು 
ಶಹಾಪುರ ತಾ.ಪಂ.ಕಚೇರಿ ಮುಂದೆ ನಡೆಸುತ್ತಿದ್ದ ಧರಣಿಯನ್ನು ಕೂಲಿ ಕಾರ್ಮಿಕರು ಗುರುವಾರ ಹಿಂಪಡೆದರು    

ಶಹಾಪುರ: ನಗರದ ತಾ.ಪಂ. ಕಚೇರಿ ಮುಂದೆ ಮೂರು ದಿನದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೂಲಿ ಕಾರ್ಮಿಕರು ನಡೆಸುತ್ತಿದ್ದ ಧರಣಿಯನ್ನು ಗುರುವಾರ ಹಿಂಪಡೆದುಕೊಂಡಿದ್ದಾರೆ.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ತಾ.ಪಂ. ಇಒ ಬಸವರಾಜ ಶರಬೈ, ‘ಬೇಡಿಕೆಗಳನ್ನು ತುರ್ತಾಗಿ ಬಗೆಹರಿಸಲಾಗುವುದು. ನಮ್ಮ ವಿಶ್ವಾಸ ಇರಲಿ’ ಎಂದು ಭರವಸೆ ನೀಡಿದ್ದು, ಅದಕ್ಕೆ ಕೂಲಿ ಕಾರ್ಮಿಕ ಮುಖಂಡರು ಒಪ್ಪಿಗೆ ಸೂಚಿಸಿದರು. ಅಲ್ಲದೆ ಇದೇ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕ ಶಿವಶರಣಪ್ಪ ಇಟಗಿ ಮೂಲಕ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಾವಲಾಸಾಬ್ ನದಾಫ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮರಾಯ ಪೂಜಾರಿ, ಮಲ್ಲಣಗೌಡ ಮಾಲಿಪಾಟೀಲ, ಹಳ್ಳ್ಳೆಮ್ಮ ದೋರನಹಳ್ಳಿ , ರೇಣುಕಾ, ದೇವಮ್ಮ, ನಾಗಮ್ಮ ಭಾಗವಹಿಸಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.